ಮಾ.೨೭ ರಂದು ನಕ್ಷತ್ರ ಧೂಳ ಏಕವ್ಯಕ್ತಿ ರಂಗಪ್ರಸ್ತುತಿ ನಾಟಕ-ಅಕ್ಕಿ

ರಾಯಚೂರು. ಮಾ.೨೫-ರೋಹಿತ್ ವೇಮುಲ ಬದುಕನ್ನಾಧರಿತ ನಕ್ಷತ್ರ ಧೂಳ ಏಕವ್ಯಕ್ತಿ ರಂಗಪ್ರಸ್ತುತಿ ನಾಟಕವು ಮಾ.೨೭ರಂದು ನಡೆಯಲಿದೆ ಎಂದು ಹಿರಿಯ ರಂಗಭೂಮಿ ಕಲವಿದರಾದ ವಿ.ಎನ್.ಅಕ್ಕಿ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ರಂಗಭೂಮಿಯಲ್ಲಿ ಇತ್ತೀಚಿನ ದಿನಮಾನಗಳಲ್ಲಿ ಹೊಸ ಆಯಾಮ ಮಾಡಲಾಗಿದ್ದು ರೋಹಿತ್ ವೇಮುಲ ಬದುಕನ್ನಾಧರಿತ ನಕ್ಷತ್ರ ಧೂಳ ಏಕವ್ಯಕ್ತಿ ರಂಗ ಪ್ರಸ್ತುತಿ ನಾಟಕವು ಮಾ.೨೭ ರಂದು ಸಂಜೆ.೬:೩೦ಕ್ಕೆ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯಲಿದ್ದು ಈ ಏಕ ವ್ಯಕ್ತಿ ಲಕ್ಷಣ ಮಂಡಲಗೇರ ಅವರು ಪ್ರಸ್ತುತಿ ಪಡಿಸಿದ್ದಾರೆ.
ಇವರು ಸುಮಾರು ೧ ಗಂಟೆ ೩೦ ನಿಮಿಷಗಳ ಕಾಲ ಸುಮಾರು ೯ ಪಾತ್ರಗಳಲ್ಲಿ ಒಬ್ಬರೇ ಅಭಿನಹಿಸಲಿದ್ದಾರೆ.
ಈ ನಾಟಕವು ರಂಗಭೂಮಿ ಕ್ಷೇತ್ರದಲ್ಲಿ ಹೊಸ ಆಯಾಮವಾಗಿದೆ ಈ ನಾಟಕವು ಸಾರ್ವಜನಿಕರಿಗೆ ಉಚಿತ ಪ್ರವೇಶ ಮಾಡಲಾಗಿದೆ ನಾಟಕದ ನಿರ್ದೇಶನವನ್ನು ಪ್ರವೀಣ್ ರೆಡ್ಡಿ ಗುಂಜಹಳ್ಳಿ,ನಿರ್ವಹಣೆ ಶರಣಬಸವ ಸಿಂಧನೂರು, ಸಂಗೀತ ಎಸ್.ಪಿ. ಮಂಜುನಾಥ ಚಳ್ಳಿಕೆರೆ,ಬೆಳಕು ನಾಗಪ್ಪ ಬಾಳೆ, ಪೋಸ್ಟರ್ ವಿನ್ಯಾಸವನ್ನು ಎ.ಕೇಶವಮೂರ್ತಿ ಸೇರಿದಂತೆ ಇನ್ನಿತರರು ನಾಟಕಕ್ಕೆ ಶ್ರಮ ಪಟ್ಟಿದರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣಬಸವ ಸಿಂಧನೂರು, ರಂಗಸ್ವಾಮಿ,ವೆಂಕಟನರಸಿಂಹಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.