ಮಾ. ೨೭ ಬಾಂಗ್ಲಾಕ್ಕೆ ಪ್ರಧಾನಿ ಭೇಟಿ

ಕೊಲ್ಕತ್ತ,ಮಾ.೧೪- ಈ ತಿಂಗಳ ೨೭ ರಿಂದ ಪ್ರಧಾನಿ ನರೇಂದ್ರಮೋದಿ ಅವರು ಎರಡು ದಿನಗಳ ಕಾಲ ನೆರೆಯ ಬಾಂಗ್ಲಾ ದೇಶದ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಮೋದಿ ಅವರು ಮಥುವಾ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಬಾಂಗ್ಲಾ ಪ್ರಧಾನಿ ಶೇಖ್‌ಹಸಿನಾ ಆಹ್ವಾನದ ಮೇರೆಗೆ ಮೋದಿ ಅವರು ಬಾಂಗ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಬಾಂಗ್ಲಾ ದೇಶದ ೫೦ನೇ ಸ್ವಾತಂತ್ರ್ಯೋತ್ಸವ ಸಮಾರಂಭ ಹಾಗೂ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮೋದಿ ಪ್ರವಾಸದ ವೇಳೆ ಬಿಜೆಪಿ ಸಂಸದ ಶಾಂತನೂ ಠಾಕೂರ್ ಅವರು ಮಥುವಾ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಹೊರಾಖಂಡಿ, ಮಥುವ ಗ್ರೂಪ್ ಪರಿಚಂದ್ ಠಾಕೂರ್ ಮತ್ತು ಗುರುಚಂದ್ ಠಾಕೂರ್ ಅವರ ಜನ್ಮ ಸ್ಥಳವಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಭಾಗವಹಿಸುತ್ತಿದ್ದು, ಈ ಸಂದರ್ಭದಲ್ಲಿ ಮೋದಿ ಅವರು ಮಥುವಾ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ ಎಂದು ಹರಿಚಂದ್ ಠಾಕೂರ್ ತಿಳಿಸಿದ್ದಾರೆ.
ಮಥುವಾ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದು, ಪಶ್ಚಿಮ ಬಂಗಾಳದೊಂದಿಗೂ ಅವಿನಾಭವ ಸಂಬಂಧ ಹೊಂದಿದೆ.