ಮಾ.೨೬ ರಂದು ತಾಲೂಕು ಮಟ್ಟದ   ರೇಣುಕಾಚಾರ್ಯ ಜಯಂತಿಗೆ ನಿಧಾ೯ರ


ಸಂಜೆವಾಣಿ ವಾರ್ತೆ
ಕುಕನೂರ, ಮಾ.04:  ಪಟ್ಟಣದಲ್ಲಿ ಮಾ.೨೬ ರಂದು ರೇಣುಕಾಚಾರ್ಯ ಜಯಂತಿಯನ್ನು ಕುಕನೂರಿನ ಶ್ರೀ ಅನ್ನದಾನೇಶ್ವರ ಮಠದಲ್ಲಿ ಕುಕನೂರು ತಾಲೂಕ ಮಟ್ಟದಲ್ಲಿ ಹರಗುರುಚರ ಮೂರ್ತಿಗಳ  ಸಮ್ಮಖದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಬೇಡ ಜಂಗಮ ಸಮಾಜದ ಅಧ್ಯಕ್ಷ ಮಹೇಶ ಕಲ್ಮಠ ಹೇಳಿದರು.
ಬುಧವಾರ ಪಟ್ಟಣದ ಅನ್ನದಾನೇಶ್ವರ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಮಾಜದ ಬಾಂಧವರು ತೆಗೆದುಕೊಂಡ ನಿರ್ಧಾರದಂತೆ ಮಾ.೨೬ ರಂದು ಪಟ್ಟಣದ ಅನ್ನದಾನೇಶ್ವರ ಮಠದಲ್ಲಿ ಅಂದು ಬೆಳ್ಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆಯ ಮೂಲಕ ಜಯಂತಿಯನ್ನು ಆಚರಿಸಲಾಗುವುದು. ಹಾಗೂ ಮಧ್ಯಾಹ್ನ  ಪ್ರಸಾದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ  ಜಂಗಮ ಸಮಾಜದ ಉಪಾಧ್ಯಕ್ಷರಾದ  ವೀರಯ್ಯ ವಸ್ತ್ರದ ,   ಕಾರ್ಯದರ್ಶಿಗಳಾದ  ಹರಿಶ್ವರಯ್ಯ ಹಿರೇಮಠ, ಖಜಾಂಚಿಗಳಾದ ಸಿದ್ದಲಿಂಗಯ್ಯ ಬಂಡಿಮಠ, ಹಾಗೂ ಜಂಗಮ ಸಮಾಜದ ಹಿರಿಯರಾದ  ಶಿವಕುಮಾರ ನಾಗಲಾಪೂರಮಠ, ಸಿದ್ದಯ್ಯ ಉಳ್ಳಾಗಡ್ಡಿ, ಕರಬಸಯ್ಯ ಬಿನ್ನಾಳ, ಶಿವಾನಂದಯ್ಯ ಕೊಪ್ಪಳಮಠ, ರುದ್ರಯ್ಯ ಇನಾಮದಾರ, ಮಂಜುನಾಥ ಗುನ್ನಾಳ, ಬಸಯ್ಯ ಶಶಿಮಠ, ಶರಭಯ್ಯ ಶಶಿಮಠ, ವೀರಯ್ಯ ಸಾಲಿಮಠ, ವೀಣಾ.ಎಸ್.ಕುಕನೂರ ಹಾಗೂ ಜಂಗಮ ಸಮಾಜ ಬಾಂಧವರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ   ಪಾಲ್ಗೊಂಡು   ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದ್ದಾರೆ.