ಮಾ.೨೬; ‘ಇಂಗ್ಲೀಷ್ ಎಂಕ್ ಬರ್ಪುಜಿ ಬ್ರೋ’ ತುಳು ಚಿತ್ರ ತೆರೆಗೆ

ಪುತ್ತೂರು; ಹಾಸ್ಯದೊಂದಿಗೆ ಉತ್ತಮ ಸಂದೇಶ ಕೂಡ ಹೊಂದಿರುವ “ಇಂಗ್ಲೀಷ್ ಎಂಕ್ ಬರ್ಪುಜಿ ಬ್ರೊ ಎಂಬ ತುಳು ಸಿನಿಮಾ ಮಾರ್ಚ್ ೨೬ರಂದು ಬಿಡುಗಡೆಗೊಳ್ಳಲಿದ್ದು, ಏಕಕಾಲದಲ್ಲಿ ೨೫ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಸಿನಿಮಾದ ನಿರ್ಮಾಪಕರಾದ ಹರೀಶ್ ಸೇರಿಗಾರ್ ಹೇಳಿದರು.
ಬುಧವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಂiiಲ್ಲಿ ಮಾತನಾಡಿದ ಅವರು, ಪುತ್ತೂರು, ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಕಡೆ ಮತ್ತು ಕಾಸರಗೋಡು, ಬೆಂಗಳೂರು, ಶಿವಮೊಗ್ಗ, ಮಡಿಕೇರಿಗಳಲ್ಲೂ ತೆರೆ ಕಾಣಲಿದೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲೂ ತುಳು ಸಿನಿಮಾ ತೆರೆ ಕಾಣುತ್ತಿರುವುದು ವಿಶೇಷವಾಗಿದೆ ಎಂದವರು ನುಡಿದರು.
ಕುಲೆತ ಮದಿಮೆ (ಪ್ರೇತ ವಿವಾಹ) ಎಂಬುದು ತುಳುನಾಡಿನಲ್ಲಿ ಹಿಂದಿನಿಂದಲೇ ಬೆಳೆದು ಬಂದಿರುವ ಒಂದು ಸಂಪ್ರದಾಯ. ಈ ಕಥಾ ಹಂದರ ಹಿಡಿದುಕೊಂಡು ಅದನ್ನೇ ಹಾಸ್ಯ ಮಿಶ್ರಿತ ಶೈಲಿಯಲ್ಲಿ ಹೇಳಲು ಹೊರಟಿದ್ದೇವೆ. ತುಳು ರಂಗಭೂಮಿ ಮತ್ತು ತುಳು ಸಿನಿಮಾ ಲೋಕದ ಹಾಸ್ಯ ದಿಗ್ಗಜರಾದ ನವೀನ್ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ದೀಪಕ್ ರೈ ಪಾಣಾಜೆ ಮುಂತಾದವರ ತಂಡವೇ ಇದ್ದು ಬೊಂಬಾಟ್ ಹಾಸ್ಯ ರಸಾಯನ ಉಣ ಬಡಿಸಲಾಗುತ್ತಿದೆ. ೨ ಗಂಟೆ ೨೦ ನಿಮಿಷದ ಸಿನಿಮಾದಲ್ಲಿ ಎಲ್ಲೂ ಕೂಡ ದ್ವಂದ್ವಾರ್ಥಗಳ ಹಾಸ್ಯವಿಲ್ಲ. ಅಶ್ಲೀಲ ಸಂಭಾಷಣೆಯಾಗಲಿ, ಅಶ್ಲೀಲತೆಯ ಛಾಯೆಯಾಗಲಿ ಎಲ್ಲ. ಇಡೀ ಕುಟುಂಬ ಸದಸ್ಯರು ಒಟ್ಟು ಸೇರಿ ನೋಡಬಹುದಾದ ಸದಭಿರುಚಿಯ ಸಿನಿಮಾ ಇದಾಗಿದೆ ಎಂದು ಅವರು ತಿಳಿಸಿದರು.
ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಮಾ. ೨೬ರಂದು ಬೆಳಗ್ಗೆ ೧೦.೧೫ಕ್ಕೆ ಸಿನಿಮಾ ಬಿಡುಗಡೆ ಸಮಾರಂಭ ನಡೆಯಲಿದೆ. ೧೧ ಗಂಟೆಗೆ ಪ್ರಥಮ ಪ್ರದರ್ಶನವಿದೆ ಎಂದು ಸಿನಿಮಾದ ವಿತರಕರಾದ ಬಾಲಕೃಷ್ಣ ಶೆಟ್ಟಿ ಹೇಳಿದರು.
ತುಳು ಸಿನಿಮಾ ಪ್ರೇಕ್ಷಕರು ಹಾಸ್ಯ ಸಿನಿಮಾಗಳನ್ನು ಇಷ್ಟ ಪಡುತ್ತಾರೆ. ಉತ್ತಮ ಹಾಸ್ಯ ಸಿನಿಮಾಗಳನ್ನು ತುಳು ಪ್ರೇಕ್ಷಕರು ಗೆಲ್ಲಿಸಿದ್ದಾರೆ. ಹಾಸ್ಯ ಮಾತ್ರವಲ್ಲದೆ ಉತ್ತಮ ದೃಶ್ಯಾವಳಿಗಳು ಇದರಲ್ಲಿವೆ. ಬೆಂಗಳೂರು ಮತ್ತು ಕರಾವಳಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಕನ್ನಡ ಸಿನಿಮಾ ರಂಗದ ಹಿರಿಯ ನಟ ಅನಂತನಾಗ್ ಅವರು ಮೊದಲ ಬಾರಿ ಈ ಚಿತ್ರದ ಮೂಲಕ ತುಳು ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕರ ಸೂರಜ್ ಶೆಟ್ಟಿ ಹೇಳಿದರು. ಚಿತ್ರದ ನಾಯಕ ನಟ ಪೃಥ್ವಿ ಅಂಬರ್ ಮತ್ತು ನಾಯಕಿ ನವ್ಯಾ ಪೂಜಾರಿ
ಗೋಷ್ಟಿಯಲ್ಲಿ ಮಾತನಾಡಿದರು.