ಮಾ.೨೫ ರಂದು‌ ವನಿತಾ ಡಿಜಿಟಲ್ ಲೈಬ್ರರಿಗೆ ಚಾಲನೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೧೫: ನಗರದ ವನಿತಾ ಸಮಾಜದಿಂದ ‘ ಮಾ.೨೫ ರಿಂದ ವನಿತಾ ಡಿಜಿಟಲ್ ಲೈಬ್ರರಿ’ ಯನ್ನು ಪ್ರಾರಂಭ ಮಾಡಲಾಗುವುದು ಎಂದು ಲೈಬ್ರರಿಯ  ಅಧ್ಯಕ್ಷೆ ರೇಖಾ ಪ್ರಸನ್ನಕುಮಾರ್ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವನಿತಾ ಸಮಾಜವು ಕಳೆದ 60 ವರ್ಷಗಳಿಂದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಈಗಾಗಲೇ ಹಲವಾರು ಅಂಗಸಂಸ್ಥೆಗಳನ್ನು ಹೊಂದಿದೆ. ಡಿಜಿಟಲ್ ಲೈಬ್ರರಿಯನ್ನು ಆರಂಭಿಸುವ ಮೂಲಕ ಬ್ಯಾಂಕಿಂಗ್, ಐಎಎಸ್, ಐಪಿಎಸ್ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡಲು ಯೋಚಿಸಿದ್ದೇವೆ ಎಂದರು.ಈ ಒಂದು ಲೈಬ್ರರಿ ಆರಂಭಿಸುವಲ್ಲಿ ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಪ್ರಸನ್ನಕುಮಾರ್  ಸಾಕಷ್ಟು ಸಹಕಾರ ನೀಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ ಲೈನ್ ತರಬೇತಿಯನ್ನು  ಇನ್ ಸೈಟ್ ಐಎಎಸ್ ಸಂಸ್ಥೆಯ ವತಿಯಿಂದ ನೀಡುವುದಾಗಿ ಜಿ.ಬಿ. ವಿನಯ್ ಕುಮಾರ್ ಹೇಳಿದ್ದು, ಅವರ ಸಹಯೋಗದಲ್ಲಿ ತರಬೇತಿ ನೀಡಲಾಗುವುದು ಎಂದರು.ಆನ್ ಲೈನ್ ತರಗತಿಗಳು ಮಾರ್ಚ್ 25 ರಿಂದ ಆರಂಭವಾಗಲಿದೆ. ಇದೇ ಮಾರ್ಚ್ 16 ರಿಂದ  ವನಿತಾ ಸಮಾಜದಲ್ಲಿ ಅರ್ಜಿ ನೀಡಲಾಗುವುದು. ಆಸಕ್ತರು ಮೊ: ಪುಷ್ಪಾ-9964913202, ಮಂಗಳ-9964114869 ಸಂಪರ್ಕಿಸಲು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ, ಪದ್ಮಾ ಪ್ರಕಾಶ್, ವಾಗ್ದೇವಿ, ನಾಗರತ್ನ ಜಗದೀಶ್, ಶೀಲಾ ನಲ್ಲೂರು, ಸುಮಾ ಶಶಿಧರ್, ವಿಜಯ ಕುಮಾರಿ, ಡಾ. ಶುಭಾ ಎಸ್. ಪಾಟೀಲ್ ಇದ್ದರು.