ಮಾ.೨೫ ಕ್ಕೆ ಬೇಡರ ಕಿವಿಯಲ್ಲಿ ಕಮಲ ಎಂಬ ವಿನೂತನ ಪ್ರತಿಭಟನೆ

ದಾವಣಗೆರೆ.ಮಾ.೨೩;: ನಾಯಕ ಸಮಾಜದ ಬೇಡಿಕೆಗಳ ಈಡೇರಿಸದಿದ್ದಲ್ಲಿ ಮಾ. 25 ರಂದು ದಾವಣಗೆರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸಿದ ಸಂದರ್ಭದಲ್ಲಿ ಬೇಡರ ಕಿವಿಯಲ್ಲಿ ಕಮಲ ಎಂದು ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದು ನಾಯಕ ಸಮುದಾಯದ ಮುಖಂಡರ ಪಿ.ಬಿ. ಅಂಜುಕುಮಾರ್ ತಿಳಿಸಿದರು.ಸುದ್ದಿಗೋಷ್ಠಿ‌ಯಲ್ಲಿ ಈ ವಿಷಯ ತಿಳಿಸಿದ ಅವರು, ಮಾ.೨೫ರ ಮಧ್ಯಾಹ್ನ 1 ರ ವರೆಗೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ನಿರೀಕ್ಷೆ ಮಾಡಲಾ ಗುವುದು. ಬೇಡಿಕೆ ಈಡೇರಿಸದಿದ್ದಲ್ಲಿ ದಾವಣಗೆರೆಯ ಮದಕರಿ ನಾಯಕ ವೃತ್ತದಲ್ಲಿ ಕಿವಿಯಲ್ಲಿ ಕಮಲ ಇಟ್ಟು ಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ನಾಯಕ ಸಮಾಜದ ಬೇಡಿಕೆ ಈಡೇರಿಸಲು ವಿಫಲವಾಗಿದೆ ಎಂದು ರಾಜ್ಯದ ನಮ್ಮ ಸಮಾಜದ ಮುಖಂಡರಿಗೆ ತಿಳಿಸಲಾಗು ವುದು ಎಂದರು.ಲೋಕಸಭಾ ಚುನಾವಣಾ ಮುನ್ನ ಚಿತ್ರದುರ್ಗಕ್ಕೆ ಆಗಮಿಸಿದ್ದ ಕೇಂದ್ರದ ಗೃಹ ಸಚಿವ ಅಮಿತ್ ಶಾ ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಒಂದು ನೂರು ಕೋಟಿ ವೆಚ್ಚದಲ್ಲಿ ಚಿತ್ರದುರ್ಗ ದಲ್ಲಿ ಥೀಮ್ ಪಾರ್ಕ್ ನಿರ್ಮಾಣದ ಭರವಸೆ ನೀಡಿದ್ದರು. ನಾಲ್ಕು ವರ್ಷಗಳ ಕಳೆದರೂ ಬೇಡಿಕೆ ಈಡೇರಿಸಿಲ್ಲ ಎಂದು ದೂರಿದರು.ಕಳೆದ ವಿಧಾನ ಸಭಾ ಚುನಾವಣೆ ವೇಳೆ ನಾಯಕ ಸಮಾಜದ ಮುಖಂಡ ಬಿ. ಶ್ರೀ ರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಸ್ಟಾರ್ ಪ್ರಚಾರಕರನ್ನಾಗಿ ಬಳಸಿಕೊಂಡರು. ಕೊನೆಗೂ ಅವರನ್ನು ಉಪ ಮುಖ್ಯಮಂತ್ರಿ ಯನ್ನಾಗಿ ಮಾಡಲಿಲ್ಲ. ನಾಯಕ ಸಮಾಜದ ಯಾವುದೇ ಬೇಡಿಕೆಯನ್ನು ಬಿಜೆಪಿ ಈಡೇರಿಸಿಲ್ಲ.‌ ಮುಂದೆಯೂ ಇದೇ ರೀತಿ ಭರವಸೆ ನೀಡಿ ಮತ್ತೆ ಕಿವಿಯಲ್ಲಿ ಹೂ ಇಡಬಹುದು ಎಂದು ನಾಯಕ ಸಮಾಜ ವನ್ನು ಎಂದು ಎಚ್ಚರಿಸುವುದಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಬೇಡರಪಡೆ ರಾಜ್ಯ ಅಧ್ಯಕ್ಷ ಟಿ.ಎಸ್.ರಿಯಪ್ಪ, ಕೆ.ಎಂ. ಚನ್ನಬಸಪ್ಪ, ದೇವರಾಜ್, ಅಜಯ್ ಮದಕರಿ, ರವಿಕಿರಣ್, ಪ್ರವೀಣ್ ಕುಮಾರ್ ಸುದ್ದಿಗೋಷ್ಠಿ‌ಯಲ್ಲಿದ್ದರು.