ಮಾ.೨೫,೨೬ ಎರಡು ದಿನಗಳ ಕಾಲ ಮುಕ್ತ ಟೆನ್ನಿಸ್ ಟೂರ್ನಮೆಂಟನ್

ರಾಯಚೂರು,ಮಾ.೨೪- ರಾಯಚೂರು ಸಿಟಿ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಮಾರ್ಚ್ ೨೫ ಮತ್ತು ೨೬ ರಂದು ೩ ವರ್ಗಗಳಲ್ಲಿ ಮುಕ್ತ ಟೆನ್ನಿಸ್ ಟೂರ್ನಮೆಂಟನ್ನು ಆಯೋಜಿಸಲಾಗಿದೆ ಎಂದು ರಾಯಚೂರು ಸಿಟಿ ಟೆನ್ನಿಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಅರಿವಿ ನಾಗನಗೌಡ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ೩೦ ವರ್ಷ ಹಾಗೂ ೪೦ ವರ್ಷಕ್ಕೂ ಮೇಲ್ಪಟ್ಟು ಮತ್ತು ೬೦ ವರ್ಷಕ್ಕೂ ಮೇಲ್ಪಟ್ಟು ಹೀಗೆ ಮೂರು ವರ್ಗಗಳ ಟೂರ್ನಮೆಂಟ್ ನ್ನು ಆಯೋಜಿಸಲಾಗಿದ್ದು ,ಮೊದಲ ಬಹುಮಾನ ೧೫ ಸಾವಿರ ದ್ವಿತೀಯ ಬಹುಮಾನ ೭,೫೦೦ ಹಾಗೂ ಸೆಮಿ ಫೈನಲ್ ಪ್ರವೇಶ ಪಡೆದವರಿಗೆ ೫ ಸಾವಿರ ನಗದು ಬಹುಮಾನ ಕೊಡಲಾಗುವುದು ಎಂದರು.
ವಿಜೇತರಿಗೆ ಇನ್ವಿಟೇಶನ್ ಕಪ್ ವಿತರಿಸಲಾಗುವುದು ಟೂರ್ನಮೆಂಟ್ ಗೆ ೨೦೦ ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ. ಆಟಗಾರರಿಗೆ ವಸತಿ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದ ಅವರು ಈ ಟೂರ್ನಮೆಂಟ್ ಕೇವಲ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಮಾತ್ರ ಸೀಮಿತ ಎಂದರು.
ಈ ಸಂದರ್ಭದಲ್ಲಿ ಸೋಮ ನಾಗರಾಜು ಗೌಡ, ಎಚ್. ರವಿ ಪಾಟೀಲ್ ,ಎಚ್. ಸಂದೀಪ್ ಪಾಟೀಲ್ ,ಯೋಗೇಶ್ ಮುಂಗ ಇದ್ದರು.