ಮಾ.೨೪ರಿಂದ ೪ ದಿನಗಳ ವೃತ್ತಿ ಕೌಶಲ್ಯ ಕಾರ್ಯಾಗಾರ

ರಾಯಚೂರು.ಮಾ.೨೩-ಚಿತ್ರಕಲಾ ಶಿಕ್ಷಣ ವತಿಯಿಂದ ಮಾ.೨೪ರಿಂದ ನಾಲ್ಕುದಿನಗಳ ವೃತ್ತಿ ಕೌಶಲ್ಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾದ ಅನೀಸ್ ಫಾತಿಮಾ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕರ್ನಾಟಕ ಲಲಿತ ಕಲಾ ಅಕಾಡಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಾ.೨೪ ರಿಂದ ಮಾ.೨೭ ರವರೆ ನಾಲ್ಕು ದಿನಗಳ ಕಾಲ ನಗರದ ಕೃಷಿ ವಿಶ್ವ ವಿದ್ಯಾಲಯದ ಅವರಣದಲ್ಲಿ ನಡೆಯಲಿದೆ. ಕಾರ್ಯಾಕ್ರಮದ ಉದ್ಘಾಟನೆಯನ್ನು ಕೃಷಿ ವಿವಿ ಕುಲಪತಿ ಎಅ.ಕೆಎಸ್ ಕಟ್ಟಿಮನಿ, ಅಧ್ಯಕ್ಷತೆಯನ್ನು ಕರ್ನಾಟಕ ಲಲಿತ ಕಲಾ ಅಕಾಡಮಿ ಅಧ್ಯಕ್ಷ ಮಹೇಂದ್ರ ಡಿ.
ಮುಖ್ಯ ಅತಿಥಿಗಳಾಗಿ ಜಿ.ಪಂ. ಸಿಇಒ ಶೇಖ್ ತನ್ವೀರ್ ಅಸೀಫ್, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ತ್ರಿವಿಕ್ರಮ ಜೋಷಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹಾಂತೇಶ ಎ.ಕಂಠಿ, ಭಾಗವಹಿಸಲಿದ್ದಾರೆ.
೨೪ ರಂದು ಮಧ್ಯಾಹ್ನ ಪೋಸ್ಟರ್ ಬಣ್ಣ ಬಳಕೆ – ಹೊಸ ವಿಧಾನ ಕುರಿತು ಕಲಾಮಂದಿರ ಕಲಾಶಾಲೆಯ ಪ್ರಾಂಶುಪಾಲ ತಿರುಣಪುಕರಸು, ನಾನು ನನ್ನ ಭಾವನೆಗಳು ಕುರಿತು ಕಲಾವಿದ ಸುರೇಶ ಭಟ್, ಮಕ್ಕಳ ಪಾಲಕರ ಮನಸ್ಥಿತಿ ಕಲಾ ಶಿಕ್ಷಣ ಉದ್ಯೋಗ ವ್ಯಾಪಕತೆ ಕುರಿತು ಮಹೇಂದ್ರ ಎಇ.ಅವರು ಮಾತನಾಡಿಲಿದ್ದಾರೆ ಎಂದು ತಿಳಿಸಿದರು.
೨೫ ರಂದು ಬೆಳಗ್ಗೆ ಮಕ್ಕಳ ಕ್ರಿಯಾಶೀಲತೆ ಕುರಿತು ರೂಪ ಲಕ್ಷ್ಮಿ ಪತಿರಾವ್, ಕಲಾ ರಚನೆಯ ಬಗ್ಗೆ ಬೇರೆ ಬೇರೆ ಆಯಾಮಗಳು ಬಗ್ಗೆ ಉಪನ್ಯಾಸಕ ಹರೀಶ ನಾಯಕ, ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಅಡಿವೆಪ್ಪ ಕುರಿ, ಮಕ್ಕಳಲ್ಲಿ ಐತಿಹಾಸಿಕ ಸ್ಥಳ ಕ್ರಮ ಬರಳವಣಿಗೆ ಬಗ್ಗೆ ಗಣಿರ್ವಾಣಿ ಮಾತನಾಡಲಿದ್ದಾರೆ ಎಂದು ಹೇಳಿದರು.
೨೬ ರಂದು ಬೆಳಗ್ಗೆ ಚಲನಚಿತ್ರ ಕುರಿತು ಸಂವಾದ ಮತ್ತು ಜಲವರ್ಣ ಬಳಕೆಯಲ್ಲಿ ಹೊಸ ವಿಧಾನದ ಕುರಿತು ಕಾಂತರಾಜ್, ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ಕುರಿತು ಕಿರಣ ಮಾಡಳ್ ಮಾತನಾಡುವರು ಎಂದರು.
೨೭ ರಂದು ಬೆಳಗ್ಗೆ ಕ್ಲೆ ಮಾಡಲಿಂಗ್ ತರಬೇತಿ ಸೋಮಶೇಖರ್ ಮಾತನಾಡುವರು ಮದ್ಯಾಹ್ನ ಸಮಾರೂಪ ಸಮಾರಂಭ ಹಮ್ಮಿಕೊಂಡಿದೆ ಸಮರೂಪಕ್ಕೆ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಬಾಷಾ ಶಾಲೆಗಳ ನಿರ್ದೇಶನಾಲಯ ನಿರ್ದೇಶಕ ಲಲಿತ ಚಂದ್ರಶೇಖರ್ ಆಗಮಿಸುತ್ತಿದ್ದು, ಅತಿಥಿ ಗಳಾಗಿ ಹಿರಿಯ ಕಲಾವಿದ ಎಚ್.ಎಸ್. ಮ್ಯಾದರ್, ಲಲಿತ ಕಲಾ ಅಕಾಡಮಿ ಅದ್ಯಕ್ಷ ಮಹೇಂದ್ರ ಡಿ ವಹಿಸಲಿದ್ದಾರೆ ಈ ಕಾರ್ಯಾಗಾರದಲ್ಲಿ ಬೆಳಗಾವಿ ಗುಲ್ಬರ್ಗಾ ವಿಭಾಗದ ಸುಮಾರು ೫೦ ಜನ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.