
ರಾಯಚೂರು,ಮಾ.೧೯- ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಘೋಷಣೆ ಮಾಡಲೇ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿ ಮಾರ್ಚ್ ೨೧ ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ತಮಟೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಹನುಮಂತಪ್ಪ ಮನ್ನಾಪೂರಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಂವಿಧಾನದಲ್ಲಿನ ಸಮಾನತೆಯನ್ನು ಸಾಧಿಸಲು ಸಮಪಾಲು, ಸಮಬಾಳು ಮತ್ತು ಸಾಮಾಜಿಕ ನ್ಯಾಯದ ತತ್ವದಡಿಯಲ್ಲಿ ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿ ಹಕ್ಕೊತ್ತಾಯದ ಹೋರಾಟವು ೨೫ ವರ್ಷಗಳು ಕಳೆದರೂ ಸರ್ಕಾರಗಳು . ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿ.೧೨.೧೨.೨೦೨೨ ರಿಂದ ಇಂದಿನವರೆಗೂ ೯೬ ದಿನಗಳ ನಿರಂತರ ಅನಿರ್ಧಿಷ್ಟ ಅವಧಿ ಧರಣಿ ಸತ್ಯಾಗೃಹ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಲಿದೆ.ದಿ ೧೩.೧೨.೨೦೨೨ ಕಾನೂನು ಸಚಿವ ಸಿ.ಮಾಧುಸ್ವಾಮಿ ನೇತೃತ್ವದ ಉಪಸಮಿತಿ ರಚನೆಗೊಂಡ ನಂತರ ಹಲವಾರು ಸಭೆಗಳನ್ನು ನಡೆಸಿದೆ. ಉಪಸಮಿತಿಯಿಂದ ಶಿಫಾರಸನ್ನು ಪಡೆದು ಸಚಿವ ಸಂಪುಟದಲ್ಲಿ ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಕ್ರಮವು ನಿರ್ಲಕ್ಷತನದಿಂದ ವಿಳಂಬವಾಗುತ್ತಿರುವುದು ಖಂಡನೀಯ.ಕೂಡಲೇ ಪರಿಶಿಷ್ಟ ಜಾತಿಗಳ
ಒಳಮೀಸಲಾತಿಯನ್ನು ಜಾರಿಗೆ ತರದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ್, ನರಸಿಂಹಲು ಮಾರ್ಚಟಾಳ್, ಅಂಜಿನಯ್ಯ, ಅಬ್ರಾಹಂ ಕಮಲಾಪುರ, ಎ.ರಾಮು ಇದ್ದರು.