ಮಾ. ೨೧ವರೆಗೂ ವಂದೇ ಭಾರತ್ ವಿಮಾನಯಾನ

ನವದೆಹಲಿ,ನ.೨೨- ವಂದೇ ಭಾರತ್ ಮಿಷನ್‌ಅಡಿ ವಿದೇಶದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಆರಂಭಿಸಿದ್ದ ವಿಮಾನಯಾನ ೭ನೇ ಹಂತದಲ್ಲಿದ್ದು. ೨೦೨೧ರ ಮಾ. ೨೮ರವರೆಗೂ ಮುಂದುವರೆ ಯಲಿದೆ.
ಕೊರೊನಾ ಸೋಂಕು ಹಿನ್ನೆಲೆ ಅಂತರರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಂಡ ಹಿನ್ನಲೆ ವಿದೇಶದಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ತರಲು ಕೇಂದ್ರ ಸರ್ಕಾರ ಕಳೆದ ಮೇ ೬ ರಂದು ವಂದೇ ಭಾರತ್ ಮಿಷನ್ ಆರಂಭಿಸಿತ್ತು.
ಈ ವಿಮಾನಗಳ ಹಾರಾಟ ನ. ೨೮ರವರೆಗೂ ಮುಂದುವರೆಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಮಿಷನ್ ಭಾರತ್ ಅಡಿ ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ೨೦೨೧ರ ಮಾ. ೨೮ರವರೆಗೂ ಮುಂದುವರೆಸಲು ನಿರ್ಧರಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿಯನ್ವಯ ನ. ೧೮ರವರೆಗೆ ವಂದೇ ಭಾರತ್ ಮಿಷನ್ ಅಡಿ ೯,೪೩೦ ವಿಮಾನ ಹಾರಾಟ ನಡೆಸುವ ಮೂಲಕ ೧೨.೦೭ ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ಇವುಗಳಲ್ಲಿ ೪,೭೧೧ ವಿಮಾನಗಳು ೭,೫೫,೮೪೪ ಪ್ರಯಾಣಿಕರ ವಿಮಾನಗಳಾಗಿದ್ದು, ೪೭೧೯ ವಿಮಾನಗಳು ಹೊರ ಹೋಗುವ ವಿಮಾನಗಳಾಗಿವೆ.