ಮಾ.೨೦ ರಂದು ಮಸ್ಕಿ ಸಮಾವೇಶ, ಅಪಾರ ಅಭಿಮಾನಿಗಳು ಪಕ್ಷ ಸೇರ್ಪಡೆ

ಜನರ ಆಶಿರ್ವಾದ, ಹೋರಾಟದಿಂದ ಅಧಿಕಾರ – ಕೆ.ವಿರೂಪಾಕ್ಷಪ್ಪ
ಸಿಂಧನೂರು ಮಾ.೧೫ ಇದೇ ತಿಂಗಳು ೨೦ ರಂದು ಮಸ್ಕಿಯಲ್ಲಿ ಬಿಜೆಪಿ ಪಕ್ಷದ ಸಮಾವೇಶ ನಡೆಯಲಿದ್ದು ಅಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದ ಮೇಲೆ ಇದೆ ಮೊದಲ ಬಾರಿಗೆ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ಅವರು ಮಸ್ಕಿ ಉಪ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಮಾ.೨೦ ರಂದು ಪಕ್ಷದ ಬೃಹತ್ ಸಮಾವೇಶವನ್ನು ಮಸ್ಕಿಯಲ್ಲಿ ಹಮ್ಮಿಕೊಳ್ಳಲಾಗಿದ್ದು ಅಂದಿನ ಸಮಾವೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪಕ್ಷದ ರಾಜ್ಯಾದ್ಯಕ್ಷರು, ಸಚಿವರು ,ಶಾಸಕರು ,ಸಂಸದರು ಬಾಗವಹಿಸಲಿದ್ದು ಅಂದಿನ ಸಮಾವೇಶಕ್ಕೆ ಮಸ್ಕಿ ಮತ್ತು ಸಿಂಧನೂರು ವಿಧಾನಸಭೆ ಕ್ಷೇತ್ರ ಗಳ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇದ್ದು ಅಲ್ಲಿ ನನ್ನನ್ನು ಸರಿಯಾಗಿ ಬಳಸಿಕೊಳ್ಳಲು ಜನರ ಮಧ್ಯ ಇದ್ದು ಕೆಲಸ ಮಾಡುವ ನನಗೆ ಇದು ಸರಿ ಕಾಣದೆ ಇರುವುದರಿಂದ ನನಗೆ ಬೇಜಾರಾಗಿ ಜನರ ಮದ್ಯ ಬಂದು ಕೆಲಸ ಮಾಡುವ ಇಚ್ಛೆಯಿಂದ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದ್ದೆನೆಂದರು.
ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ನಿಮ್ಮನ್ನು ಕಡೆಗಣಿಸಿದ್ದಾರೆಯೆ ಎನ್ನುವ ಪ್ರಶ್ನೆಗೆ ನಾನು ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರುಗಳು ಕಾಂಗ್ರೆಸ್ ಪಕ್ಷದ ದೆಹಲಿ ಹೈ ಕಮಾಂಡ್ ಗೆ ಕೈ ಮುಗಿದು ಮನವಿ ಮಾಡಿಕೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರನ್ನು ಕರ ತಂದರೆ ಆ ಮನುಷ್ಯ ಪಕ್ಷಕ್ಕೆ ತಂದವರನ್ನು ನಿರ್ಲಕ್ಷ್ಯ ಮಾಡಿ ತುಳಿದು ನಾನು ಸೇರಿದಂತೆ ಇತರರನ್ನು ಪಕ್ಷದಿಂದ ಹೊರ ಹೋಗುವಂತೆ ಮಾಡಿದರು. ಈಗ ಮಾಜಿ ಮಂತ್ರಿ ರೇವಣ್ಣ ಮಾತ್ರ ಸಿದ್ದರಾಮಯ್ಯ ಜೊತೆಗಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ ಮೇಲೆ ನಿಮಗ್ಯಾಕೆ ಸಿಟ್ಟು ಎನ್ನುವ ಪ್ರಶ್ನೆಗೆ ಆ ಮನುಷ್ಯಗೆ ಕೃತಜ್ಞತೆ ಮನೋಭಾವನೆ ಇಲ್ಲ ನಾನು ಎಂಬ ಅಹಂಕಾರ ಹಾಗೂ ದುರಹಂಕಾರ ಇದೆ ನಾನೊಬ್ಬನೆ ಕುರುಬ ಸಮಾಜದ ಮುಖಂಡ ಇತರರು ಯಾರು ಬೆಳೆಯಬಾರದು ಎನ್ನುವ ಜೊತೆಗೆ ಸಿದ್ದರಾಮಯ್ಯ ಸ್ವ ಜಾತಿ ವಿರೋಧಿ ಯಾಗಿದ್ದಾರೆಂದರು.
ನೀವು ಬಿಜೆಪಿ ಪಕ್ಷ ಸೇರಿ ಅಲ್ಲಿ ಸ್ಥಾನ ಮಾನ ಸಿಗದೆ ಮುನಿಸುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಿರಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲವೂ ಸರಿಯಿಲ್ಲ ನಿಮ್ಮನ್ನು ಕಡೆಗಣಿಸಲಾಗಿದೆ ಎನ್ನುವ ಕಾರಣಕ್ಕೆ ಮರಳಿ ಬಿಜೆಪಿ ಪಕ್ಷಕ್ಕೆ ಸೇರಿದ್ದಿರಿ ಇಲ್ಲಿ ಎಷ್ಟು ದಿನ ಇರುತ್ತಿರಿ ,ಯಾವಾಗ ಯಾವ ಪಕ್ಷಕ್ಕೆ ಹೋಗುತ್ತಿರಿ ಎನ್ನುವ ಸುದ್ದಿಗಾರರ ಪ್ರಶ್ನೆಗೆ ನನಗೆ ವಯಸ್ಸಾಗಿದೆ ಇನ್ನೂ ಮುಂದೆ ಯಾವ ಪಕ್ಷಕ್ಕೆ ಹೋಗದೆ ಬಿಜೆಪಿ ಪಕ್ಷದಲ್ಲಿದ್ದು ಪಕ್ಷದ ಸಿದ್ದಾಂತ ಒಪ್ಪಿಕೊಂಡು ಪಕ್ಷದ ಆದೇಶದಂತೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿ ತಾಲೂಕಿನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಎನ್ನುವ ಕನಸು ಕಂಡಿದ್ದೆನೆಂದರು.
ಯಾವ ಉದ್ದೇಶ ಇಟ್ಟುಕೊಂಡು ನೀವು ಬಿಜೆಪಿ ಪಕ್ಷಕ್ಕೆ ಸೇರಿದ್ದಿರಿ ? ಪಕ್ಷ ಹಾಗೂ ಪಕ್ಷದ ಮುಖಂಡರುಗಳು ನಿಮಗೆ ಯಾವ ಭರವಸೆ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯದ್ಯಕ್ಷರಾದ ನಳಿನ್ ಕುಮಾರ ಕಟೀಲ ಸೇರಿದಂತೆ ಇತರರ ನಿಮಗೆ ಯಾವುದೆ ರೀತಿಯ ನೋವಾಗದಂತೆ ಸೂಕ್ತ ಸ್ಥಾನ ಮಾನ ನೀಡಿ ಪಕ್ಷ ನಡೆಸಿಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಮುಂದೆ ಪಕ್ಷ ಯಾವ ಜವಬ್ದಾರಿ ನೀಡುತ್ತದೆ ಅದನ್ನು ಸರಿಯಾಗಿ ನಿಭಾಯಿಸಿಕೊಂಡು ಪಕ್ಷದ ಸಿದ್ದಾಂತ ಆದೇಶದಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರನ್ನು ಒಂದುಗೂಡಿಸಿಕೊಂಡು ಹೋಗುತ್ತೆನೆ .ನಾನು ಎನ್ನುವುದನ್ನು ಬಿಟ್ಟು ನಾವೆಲ್ಲರೂ ಎಂದು ತಿಳಿದುಕೊಂಡು ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡುತ್ತೆನೆ.
ಕಾಶ್ಮೀರ ಸಮಸ್ಯೆ ಹಾಗೂ ಕೊರೊನಾ ಸಂಕಷ್ಟದ ಸಮಯದಲ್ಲಿ ಜಗತ್ತು ಮೆಚ್ಚುವಂತಹ ಅಭಿವೃದ್ಧಿ ಕೆಲಸ ಮಾಡಿ ಜನ ಮೆಚ್ಚುಗೆ ಯಾಗುವಂತೆ ಉತ್ತಮ ಆಡಳಿತ ವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಹಾವಳಿ ಹಾಗೂ ಕೊರೊನಾ ಸಂಕಷ್ಟದ ಸಮಯದಲ್ಲಿ ಜನರಿಗೆ ಉತ್ತಮ ಬಜೆಟ್ ಮಂಡಿಸಿದ್ದಾರೆ.ರಾಜಕೀಯ ಪಕ್ಷದಲ್ಲಿ ಯಾರು ಶಾಶ್ವತ ಮಿತ್ರರೂ ಅಲ್ಲ ,ಶತ್ರುಗಳು ಅಲ್ಲ ಬದಲಾದ ರಾಜಕೀಯ ಸಂಧರ್ಭಕ್ಕೆ ತಕ್ಕಂತೆ ನಾವು ಸಹ ರಾಜಕೀಯವಾಗಿ ಬದಲಾಗಬೇಕು ಅದು ರಾಜಕಾರಣಿಗಳಿಗೆ ಅನಿವಾರ್ಯವೂ ಕೂಡ.ಅಧಿಕಾರ ಕೆಲವರಿಗೆ ಮನೆಯಲ್ಲಿದ್ದರೂ ಸಹ ಹುಡುಕಿಕೊಂಡು ಹೋಗುತ್ತದೆ ,ಇನ್ನೂ ಕೆಲವರು ಹೋರಾಟ ಮಾಡಿ ಅಧಿಕಾರ ಪಡೆದುಕೊಳ್ಳುತ್ತಾರೆ. ಜನರ ಮದ್ಯ ಇದ್ದು ಕೆಲಸ ಮಾಡಿ ಅವರ ಪ್ರೀತಿ ವಿಶ್ವಾಸ ಗಳಿಸಿ ಹೋರಾಟದಿಂದ ಅಧಿಕಾರ ಪಡೆಯುವವನೆ ನಿಜವಾದ ಜನ ನಾಯಕ ಎಂದರು.
ಕೆ.ವಿರೂಪಾಕ್ಷಪ್ಪ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದು ಸಿಂಧನೂರು ಕ್ಷೇತ್ರ ಅಲ್ಲದೆ ಮೂರು ಜಿಲ್ಲೆಗಳಲ್ಲಿ ಆನೆ ಬಲ ಬಂದಾಂತಾಗಿದೆ ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ಪಕ್ಷದ ಮುಖಂಡರು ಗಳು ಮಸ್ಕಿ ಕ್ಷೇತ್ರವನ್ನು ಗೆಲ್ಲಲು ಶಪಥ ಮಾಡಿದ್ದಾರೆ .ಜನ ,ಕಾರ್ಯಕರ್ತರು ಹೆಚ್ಚು ಆಸಕ್ತಿ ತೋರಿಸಿದ್ದಾರೆ.ಬಿಜೆಪಿ ಪಕ್ಷದಲ್ಲಿ ಯಾರು ದೊಡ್ಡವರಲ್ಲ ಯಾರೂ ಸಣ್ಣ ವರಲ್ಲ ಎಲ್ಲರೂ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಬೇಕು ಅಂತಹವರನ್ನು ಗುರುತಿಸಿ ಸಾಮಾನ್ಯ ಕಾರ್ಯಕರ್ತರಿಗೆ ಸೂಕ್ತ ಸ್ಥಾನವನ್ನು ಹಾಗೂ ಅಧಿಕಾರ ನೀಡುತ್ತದೆ ಇದು ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಡ್ಯಾಂ ನಲ್ಲಿ ಇದ್ದರೂ ಸಹ ಕಾಲುವೆಗೆ ನೀರು ಬಿಡಲಿಲ್ಲ ಈಗ ರೈತರ ಬೇಸಿಗೆ ಬೆಳೆ ಒಣಗದಂತೆ ಕಾಲುವೆಗೆ ನೀರು ಬಿಡಲು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆಂದು ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಕೊಲ್ಲಾ ಶೇಷಗಿರಿರಾವ್ ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷರಾದ ಹನುಮೇಶ ಸಾಲಗುಂದಾ, ನಗರ ಮಂಡಲ ಅಧ್ಯಕ್ಷ ಪ್ರೇಮಾ ಸಿದ್ದಾಂತಿ ಮಠ, ಜಿಪ ಸದಸ್ಯರಾದ ಶಿವನಗೌಡ ಗೋರೆಬಾಳ, ಪಕ್ಷದ ಮುಖಂಡರಾದ ಶಿವರಾಜ ಪಾಟೀಲ, ಅಮರೇಶ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.