ಮಾ.೨೦ಕ್ಕೆ ಬಿ.ವೈ.ವಿಜಯೇಂದ್ರ ಸಿರವಾರಕ್ಕೆ ಆಗಮನ

ಸಿರವಾರ,ಮಾ.೧೮- ಯುವಕರ ಕಣ್ಮಣಿ, ಬಿಜೆಪಿ ಯೂತ್ ಐಕಾನ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಮಾ.೨೦ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸುತ್ತಿರುವದರಿಂದ ಅಂದು ಸಿರವಾರ ಪಟ್ಟಣಕ್ಕೆ ಸಹ ಆಗಮಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಸಿರವಾರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರು ಜೆ.ದೇವರಾಜಗೌಡ ಹೇಳಿದರು.
ಪಟ್ಟಣದ ಲಿಂಗಸುಗೂರು ರಸ್ತೆಯಲ್ಲಿರುವ ಬಸವ ಮೋಟಾರ್ಸ್ ಕಾರ್ಯಲಯದಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮಾ. ೨೦ ಸೋಮವಾರದಂದು ಜಿಲ್ಲೆಗೆ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ವಿವಿಧ ಮೊರ್ಚಗಳ ಸಭೆಗಾಗಿ ಅದರಲೂ ಮಟಮಾರಿಯಲ್ಲಿ ಎಸ್.ಟಿ.ಮೊರ್ಚಾ ಹಾಗೂ ಲಿಂಗಸುಗೂರು ಎಸ್.ಸಿ ಯುವ ಮೊರ್ಚಾ ಸಮಾವೇಶಕ್ಕೆ ಸಿರವಾರ ಮಾರ್ಗವಾಗಿ ತೆರಳುತ್ತಿದ್ದು, ಮಧ್ಯಾಹ್ನ ೩-೪ ಗಂಟೆಗೆ ಸಿರವಾರ ಮಾರ್ಗವಾಗಿ ತೆರಳುತ್ತಿದ್ದೂ, ಅವರನ್ನು ರಾಯಚೂರು ರಸ್ತೆಯಲ್ಲಿ ಸಾವಿರಾರು ಯುವಕರ ಬೈಕ್ ರ್‍ಯಾಲಿ ಮೂಲಕ ಸ್ವಾಗತಿಸಿ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಅದೇ ಮಾರ್ಗವಾಗಿ ಬಸ್ ನಿಲ್ದಾಣ ಹತ್ತಿರ ಕರೆತಂದು ಪಕ್ಷದ ಕಾರ್ಯಕರ್ತರ ಕುರಿತು ಬಹಿರಂಗವಾಗಿ ಭಾಷಣ ಮಾಡುವರು.
ನಂತರ ಮಾನ್ವಿ ಕ್ರಾಸ್‌ವರೆಗೂ ತೆರಳಿ ಅಲಿಂದ ಬೀಳ್ಕೊಡಲಾಗುವುದು. ಸಿರವಾರ ತಾಲೂಕಿನ ನೀರಾವರಿ, ಮಿನಿ ವಿಧಾನ ಸೌಧ ನಿರ್ಮಾಣ, ಕ್ರೀಡಾಂಗಣ, ಅಗ್ನಿಶಾಮಕ ಠಾಣೆ, ತಾಲ್ಲೂಕು ಕಚೇರಿಗಳ ನಿರ್ಮಾಣ, ವಿವಿಧ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಲಾಗುವದು. ಇದರಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರಸಿಂಹರಾವ್ ಕುಲಕರ್ಣಿ, ಶಿವಶರಣರಗೌಡ ಲಕ್ಕಂದಿನ್ನಿ, ಪ.ಪಂ.ಸದಸ್ಯ ಕೃಷ್ಣನಾಯಕ, ಅಜೀತ್ ಹೊನ್ನಟಗಿ,ಜೆ.ಬಸವರಾಜ, ನಗರ ಘಟಕ ಅಧ್ಯಕ್ಷ ಅಮರೇಶ ಹೆಚ್.ಕೆ., ತಾ.ಪಂ.ಮಾಜಿ ಸದಸ್ಯರಾದ ನಾಗನಗೌಡ ಅತ್ತನೂರು, ತಾ.ಪಂ ಮಾಜಿ ಸದಸ್ಯ ಸಿದ್ದಯ್ಯಸ್ವಾಮಿ, ಹನುಮಂತರಾಯ ಅತ್ತನೂರು, ಈರಣ್ಣ ನಾಯಕ ಗಣದಿನ್ನಿ, ಉಮೇಶಜೇಗರಕಲ್, ಶಾಖಾಪುರ,ನಾಗರಾಜಗೌಡ, ಶಿವನಗೌಡ, ಕುಪ್ಪಾಚಾರಿ, ವಿನಾಯಕ,ರಾಜು,ರವಿ, ಸುಭಾಷ, ಚಾಗಭಾವಿ,ಯಲ್ಲನಗೌಡ, ವಿರೇಶ, ಸುರೇಶಗೌಡ ನವಲಕಲ್, ರಾಮಯ್ಯ, ವಾಹೀದ್,ಮುತ್ತಣ ಚಾಗಭಾವಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.