
ದಾವಣಗೆರೆ.ಮಾ.೧೭; ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾದ ಡಿ.ಜಿ. ರೇವಣಸಿದ್ದಪ್ಪ ಅವರ ಚೊಚ್ಚಲ ಸಂಪಾದನಾ ಸೂಕ್ತಿಗಳು ಕೃತಿ ಬಿಡುಗಡೆ ಸಮಾರಂಭ ಮಾ. 19 ರಂದು ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಸಾಹಿತಿ ಓಂಕಾರಯ್ಯ ತವನಿಧಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಡಿ.ಜಿ. ರೇವಣಸಿದ್ದಪ್ಪ ಸಾವಯವ ಕೃಷಿಕರಾಗಿದ್ದು ತಮ್ಮ ಅನುಭವವನ್ನು ಕೃತಿಯಲ್ಲಿ ಅಳವಡಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿನ ಪ್ರಕಟಿತ ಸೂಕ್ತಿಗಳ ಸಂಗ್ರಹಿಸಿ ಅತ್ಯಮೂಲ್ಯ ಕೃತಿ ನೀಡಿದ್ದಾರೆ ಎಂದು ತಿಳಿಸಿದರು.ಭಾನುವಾರ ಬೆಳಗ್ಗೆ 11ಕ್ಕೆ ಕೃತಿ ಲೋಕಾರ್ಪಣ ಸಮಾರಂಭವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಉದ್ಘಾಟಿಸುವರು. ನಿಕಟ ಪೂರ್ವ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ. ಆನಂದ ಋಗ್ವೇದಿ ಕೃತಿ ಕುರಿತು ಮಾತನಾಡುವರು. ಡಿ.ಜಿ. ರೇವಣಸಿದ್ದಪ್ಪ, ಕೆ.ಟಿ. ಮಹೇಶ್ ಇತರರು ಭಾಗವಹಿಸುವರು ಎಂದು ತಿಳಿಸಿದರು.ಕೃತಿಕಾರ ಡಿ.ಜಿ. ರೇವಣಸಿದ್ದಪ್ಪ ಮಾತನಾಡಿ, ಆರೋಗ್ಯ ಇಲಾಖೆಯ ಪ್ರಯೋಗ ತಂತ್ರಜ್ಞರಾಗಿ ಕೆಲಸ ಮಾಡಿದ್ದು, ಆರೋಗ್ಯದಲ್ಲಿ ಏರುಪೇರು ಉಂಟಾಗಿ ಸಾವಿನ ಅಂಚಿನವರೆಗೂ ಹೋಗಿ ಬಂದಿದ್ದೇನೆ. ನಮ್ಮ ಆರೋಗ್ಯ ವನ್ನ ನಾವೇ ಕಾಪಾಡಿಕೊಳ್ಳಬಹುದು ಎಂದು ಅನಿಸಿತು. ನಿಧಾನವಾಗಿ ಚೇತರಿಸಿಕೊಂಡ ನಂತರ ಆಧ್ಯಾತ್ಮಿಕ ಇತರೆಡೆ ತೊಡಗಿಸಿಕೊಂಡ ಅನೇಕ ವಿಚಾರಗಳ ಕೃತಿಯಲ್ಲಿ ಬರೆಯ ಲಾಗಿದೆ ಎಂದು ತಿಳಿಸಿದರು.ನಿವೃತ್ತ ಪಿಎಸ್ ಐ ಜಿ.ಎಸ್. ನಾಗರಾಜ್, ನಿವೃತ್ತ ಮುಖ್ಯ ಶಿಕ್ಷಕ ಪಿ.ಎಸ್. ಜಯಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು