ಮಾ.೧೯ ಕ್ಕೆ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ

ಜಗಳೂರು.ಮಾ.೮;  ತಾಲೂಕಿನ ಮಡ್ರಳ್ಳಿ ಗ್ರಾಮದಲ್ಲಿ ಮಾ. 10-3 ರಂದು ಅಡವಿ ದೇವತೆ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವವನ್ನು ಯಾವುದೇ ಅಡಚಣೆ ಯಾಗ ದಂತೆ ಅಗತ್ಯ ಸಕಲ ಸಿದ್ದತೆಗೊಳಿಸಿ ಯಶಸ್ವಿ ಗೊಳಿಸಬೇಕು ಎಂದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಸೂಚಿಸಿದರು.ತಾಲೂಕಿನ ಗುರುಸಿದ್ದಾಪುರ ಸಮುದಾಯ ಭವನದಲ್ಲಿ ಯಾನೆ ಮಡ್ರಹಳ್ಳಿ ಚೌಡೇಶ್ವರಿ ಜಾತ್ರಾಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದರು. ಬಾರಿ ನೆರೆಹೊರೆಯ ಜಿಲ್ಲಾ ಮತ್ತು ತಾಲೂಕುಗಳಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಶಕ್ತಿದೇವತೆ‌ ಭಕ್ತಸಮೂಹ ಆಗಮಿಸುವ ನಿರೀಕ್ಷೆಯಿದೆ ಆದ್ದರಿಂದ ಗ್ರಾಮಪಂಚಾಯಿತಿ,ಆರೋಗ್ಯ,ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಜನಜಾನು ವಾರುಗಳಿಗೆ ಕುಡಿಯುವ ನೀರಿನ ಪೂರೈಕೆ,ವಾಹನ ನಿಲುಗಡೆಗೆ ಸ್ಥಳಾವಕಾಶ, ವಿದ್ಯುತ್ ಪೂರೈಕೆ,ಅಗ್ನಿಶಾಮಕದಳ ವಾಹನ, ಸ್ವಚ್ಛತೆ,ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ದೇವಿಯ ಭಕ್ತಾದಿಗಳ ದರ್ಶನ ರಥೋತ್ಸವ ಸುಗಮವಾಗಿ ನಡೆಸಬೇಕು ಎಂದು ಹೇಳಿದರು.ಮಾರ್ಚ್ 10 ರಂದು ರಥೋತ್ಸವ,11 ರಂದು ರಂಗಯ್ಯನ ಬೆಟ್ಟಕ್ಕೆ ಹೋಗುವುದು,12 ಗಂಗೆಪೂಜೆ,13 ರಂದು ಗುಡಿತುಂಬುವ ಕಾರ್ಯಕ್ರಮಗಳನ್ನು ಮಡ್ರಳ್ಳಿ ಚೌಡೇಶ್ವರಿ ದೇವಸ್ಥಾನ ಸಮಿತಿ ಅವರು ಹಮ್ಮಿಕೊಳ್ಳಲಾಗಿದ್ದು. ನಮ್ಮ ಕ್ಷೇತ್ರದ ಶಾಸಕರು ಕಾರ್ಯನಿಮಿತ್ತವಾಗಿರುವ ಶಾಸಕರ ಅನುಪಸ್ಥಿತಿಯಲ್ಲಿ ಅವರ ಸಲಹೆಯಂತೆ ಪೂರ್ವಭಾವಿ ಸಭೆ ನಡೆಸಲಾಗಿದೆ.ಎಲ್ಲರೂ ಸಹಕರಿಸಬೇಕು ಎಂದರು.ಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ,ಜಾತ್ರೆಯ ಸಂದರ್ಭದಲ್ಲಿ ಮುತ್ತು ಕಟ್ಟುವುದು ಕಾನೂನಿನ ಅಪರಾಧ .ಮೌಢ್ಯತೆ ಆಚರಣೆ ಮಾಡಬಾರದು.ದೇವದಾಸಿ ಪದ್ದತಿಯಿಂದ ಹೊರಬರಬೇಕು. ಸಾಂಪ್ರದಾಯಿಕ ಪೂಜೆ ರಥೋತ್ಸವ, ಆಚರಣೆಗಳನ್ನು ಮಾತ್ರ ಅನುಸರಿಸಬೇಕು ಎಂದು ಜಾಗೃತಿ ಮೂಡಿಸಿದರು.ಟಎಚ್.ಓ ಡಾ.ನಾಗರಾಜ್ ಮಾತನಾಡಿ,ಜಾತ್ರಾಮಹೋತ್ಸವ ಮುಕ್ತಾಯದವರೆಗೆ ವೈದ್ಯರು ಹಾಗೂ ಸುಶ್ರೂಷಕಿಯರ ನಿಯೋಜನೆ,ಅಂಬ್ಯುಲೆನ್ಸ್,ಆರೋಗ್ಯ ಸೇವೆಗೆ ಸಿದ್ದತೆಗೊಳಿಸ ಲಾಗುವುದು.ಮೆಡಿಸನ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.