ಮಾ. ೧೮ರೊಳಗೆ ಚುನಾವಣಾ ಬಾಂಡ್ ಸಂಪೂರ್ಣ ಮಾಹಿತಿ ನೀಡಿ

ಎಸ್‌ಬಿಐಗೆ ಸುಪ್ರೀಂ ಗಡುವು

ನವದೆಹಲಿ,ಮಾ.೧೫- ಚುನಾವಣಾ ಬಾಂಡ್‌ಗಳ ಖರೀದಿಗೆ ಸಂಬಂಧಿಸಿದಂತೆ “ಸಂಪೂರ್ಣ ಮಾಹಿತಿ” ಹಂಚಿಕೊಳ್ಳದಿದ್ದಕ್ಕಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಅನ್ನು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದ್ದು ಯಾವ ಯಾವ ಪಕ್ಷಕ್ಕೆ ಯಾವ ಕಂಪನಿಗಳು ಎಷ್ಟು ದೇಣಿಗೆ ಬಂದಿದೆ ಎನ್ನುವುದನ್ನು ಪಕ್ಷವಾರು ಮಾಹಿತಿಯನ್ನು ಮಾಚ್ ೧೮ರೊಳಗೆ ನೀಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.ದೇಣಿಗೆದಾರರು ಮತ್ತು ರಾಜಕೀಯ ಪಕ್ಷಗಳ ನಡುವಿನ ಸಂಬಂಧವನ್ನು ಮಾಚ್‌ಬಹಿರಂಗಪಡಿಸುವ ಚುನಾವಣಾ ಬಾಂಡ್ ಸಂಖ್ಯೆಗಳನ್ನು ಪ್ರಕಟಿಸಿ ಎಂದು ನೋಟೀಸ್ ನೀಡಿ ಆದೇಶಿಸಿದೆ.ಚುನಾವಣಾ ಬಾಂಡ್‌ಗಳ ಆದೇಶ ಮಾರ್ಪಾಡು ಮಾಡುವಂತೆ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಈ ಸೂಚನೆ ನೀಡಿದೆ.ಚುನಾವಣಾ ಬಾಂಡ್ ರದ್ದುಗೊಳಿಸಿ ಆದೇಶ ನೀಡಿ ವಿವರ ನೀಡುವಂತೆ ಎಸ್‌ಬಿಐಗೆ ಆದೇಶಿಸಿದ್ದರೂ ಅಪೂರ್ಣ ಮಾಹಿತಿ ನೀಡಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದು ಕಳೆದ ೫ ವರ್ಷಗಳಲ್ಲಿ ಮಾಡಿದ ದೇಣಿಗೆಗಳ ಎಲ್ಲಾ ವಿವರಗಳನ್ನು ಹಂಚಿಕೊಳ್ಳಲು ಬ್ಯಾಂಕ್‌ಗೆ ನಿರ್ದೇಶಿಸಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ನೀಡಿದ ಮಾಹಿತಿ ಅಪೂರ್ಣವಾಗಿ ಎಂದು ಕಿಡಿಕಾರಿದ್ದು ಈ ಲೋಪ ಸರಿ ಪಸಿಡಿಸಿ ಎಂದು ನೋಟೀಸ್ ನೀಡಿ ಮಾಚ್ ೧೮ಕ್ಕೆ ವಿಚಾರಣೆ ಮುಂದೂಡಿದೆ.ವ್ಯಕ್ತಿಗಳು ಮತ್ತು ಉದ್ಯಮಗಳು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಲು ಅವಕಾಶ ನೀಡುವ ಯೋಜನೆಯಾದ ಚುನಾವಣಾ ಬಾಂಡ್‌ಗಳ ಸಂಪೂರ್ಣ ಡೇಟಾವನ್ನು ಸಂಪೂರ್ಣವಾಗಿ ಯಾಕೆ ಹಂಚಿಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದೆ.ಸುಪ್ರೀಂ ಕೋರ್ಟ್ ಗೆ ಎಸ್ ಬಿಐ ನೀಡಿರುವ ಅಂಕಿಅಂಶಗಳು ಅಪೂರ್ಣ ವಾಗಿದೆ. ಎಸ್‌ಬಿಐ ಈಗಾಗಲೇ ಹಂಚಿಕೊಂಡಿರುವ ವಿವರಗಳ ಜೊತೆಗೆ ಚುನಾವಣಾ ಬಾಂಡ್ ಸಂಖ್ಯೆಯನ್ನು ನಿಖರ ಮಾಹಿತಿಯೊಂದಿಗೆ ಬಹಿರಂಗಪಡಿಸುವಂತೆ ಸೂಚಿಸಿದೆ.”ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರವಾಗಿ ಯಾರು ಹಾಜರಾಗುತ್ತಿದ್ದಾರೆ. ಅವರು ಬಾಂಡ್ ಸಂಖ್ಯೆಗಳನ್ನು ಯಾಕೆ ಬಹಿರಂಗಪಡಿಸಿಲ್ಲ. ಅದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಪೂರ್ಣ ವಿವರ ಬಹಿರಮಗ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಕಟ್ಟುನಿಟ್ಟಿನ ಆದೇಶ ನೀಡಿದೆ.
ಚುನಾವಣಾ ಬಾಂಡ್ ಸಂಖ್ಯೆಗಳು ದಾನಿಗಳು ಮತ್ತು ರಾಜಕೀಯ ಪಕ್ಷಗಳ ನಡುವೆ ಸಂಪರ್ಕವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಆದರೂ ಚುನಾವಣಾ ಬಾಂಡ್ ಖರೀದಿ ಮಾಡಿರುವ ಮಂದಿಯ ವಿವಿರವಾದ ಮಾಹಿತಿ ಯಾಕೆ ನೀಡಿಲ್ಲ, ಇದರ ಉದ್ದೇಶ ಏನು ಎಂದು ಪ್ರಶ್ನೆ ಮಾಡಿದೆ
ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಸಲ್ಲಿಕೆಗಳನ್ನು ಗಮನಿಸಿತು. ಚುನಾವಣಾ ಬಾಂಡ್‌ಗಳ ಆಲ್ಫಾ-ಸಂಖ್ಯೆಯ ಸಂಖ್ಯೆಗಳನ್ನು ಎಸ್‌ಬಿಐ ಬಹಿರಂಗಪಡಿಸಿಲ್ಲ. ಬ್ಯಾಂಕ್‌ಗೆ ನೋಟಿಸ್ ಜಾರಿ ಮಾಡಿ ಮಾರ್ಚ್ ೧೮ಕ್ಕೆ ವಿಚಾರಣೆಗೆ ಮುಂದೂಡಿದೆ.
ಚುನಾವಣಾ ಆಯೋಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಂಚಿಕೊಂಡಿರುವ ಚುನಾವಣಾ ಬಾಂಡ್‌ಗಳ ಡೇಟಾವನ್ನು ಸಾರ್ವಜನಿಕಗೊಳಿಸಿದೆ. ಈ ಡೇಟಾವನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಎರಡು ಭಾಗಗಳಲ್ಲಿ ಹಂಚಿಕೊಂಡಿದೆ.ಚುನಾವಣಾ ಸಮಿತಿಯು ಅಪ್‌ಲೋಡ್ ಮಾಡಿದ ಮಾಹಿತಿಯ ಪ್ರಕಾರ, ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಪಿರಮಲ್ ಎಂಟರ್‍ಪ್ರೈಸಸ್, ಟೊರೆಂಟ್ ಪವರ್, ಭಾರ್ತಿ ಏರ್‍ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್, ಅಪೊಲೊ ಟೈರ್ಸ್, ಲಕ್ಷ್ಮಿ ಮಿತ್ತಲ್, ಎಡೆಲ್‌ವೀಸ್, ಪಿವಿಆರ್, ಕೆವೆಂಟರ್ , ಸುಲಾ ವೈನ್, ವೆಲ್ಸ್ಪನ್ ಮತ್ತು ಸನ್ ಫಾರ್ಮಾ.

  • ಸಂಪೂರ್ಣ ವಿವರ ಸಲ್ಲಿಸದ ಎಸ್‌ಬಿಐಗೆ ಸುಪ್ರೀಂಕೋರ್ಟ್ ತರಾಟೆ
  • ಚುನಾವಣಾ ಬಾಂಡ್ ಖರೀದಿದಾರರ ಸಂಪೂರ್ಣ ಮಾಹಿತಿ ಬಹಿರಂಗಕ್ಕೆ ತಾಕೀತು
  • ಚುನಾವಣಾ ಬಾಂಡ್‌ಗಳ ಆದೇಶ ಮಾರ್ಪಾಡು ಮಾಡುವಂತೆ ಆಯೋಗ ಸಲ್ಲಿಸಿದ್ದ ಅರ್ಜಿ ವಿಚಾರಣೆ
  • ದೇಣಿಗೆದಾರರು ಮತ್ತು ರಾಜಕೀಯ ಪಕ್ಷಗಳ ನಡುವಿನ ಸಂಬಂಧವನ್ನು ಬಹಿರಂಗಪಡಿಸಿ
  • ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಆದೇಶ
  • ಈ ಲೋಪ ಸರಿ ಪಸಿಡಿಸಿ ಎಂದು ನೋಟೀಸ್
  • ಪ್ರಕರಣದ ವಿಚಾರಣೆಯನ್ನು ಮಾರ್ಚ್ ೧೮ಕ್ಕೆ ವಿಚಾರಣೆ ಮುಂದೂಡಿದೆ.