ಮಾ.೧೫ ಕ್ಕೆ ಹೈಡ್ ಅಂಡ್ ಸೀಕ್’ ಚಲನಚಿತ್ರ ಬಿಡುಗಡೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಮಾ.೯: ಸುನೇರಿ ಆರ್ಟ್ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಿಸಿರುವ ‘ಹೈಡ್ ಅಂಡ್ ಸೀಕ್’ ಚಿತ್ರ ಇದೇ ಮಾರ್ಚ್ 15 ರಂದು  ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಪುನೀತ್ ನಾಗರಾಜ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನನ್ನ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಇದು ಒಂದು ಸಸ್ಪೆನ್ಸ್ ಥಿಲ್ಲರ್ ಸಿನಿಮಾ ಆಗಿದೆ., ಆರ್ಗನೈಜೇಷನ್ ಮೂಲಕ ಹೈ ಪ್ರೊಫೈಲ್ ಕಿಡ್ನಾಪ್‌ಗಳು ಹೇಗೆ ನಡೆಯುತ್ತಿವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹೈಡ್ ಅಂಡ್ ಸೀಕ್ ಚಿತ್ರದಲ್ಲಿ ನಾಯಕನೇ ಕಿಡ್ನಾಪರ್ ಆಗಿದ್ದು, ಹೆಚ್ಚು ಮಾತನಾಡದೇ ಯಾವುದನ್ನೂ ಎಕ್ಸ್‌ಪ್ರೆಸ್ ಮಾಡದ ವ್ಯಕ್ತಿಯ ಪಾತ್ರವಾಗಿದೆ ಎಂದರು.ಒಬ್ಬ ಬಿಸಿನೆಸ್ ಮ್ಯಾನ್ ಮಗಳಾಗಿರುವ ನಾಯಕಿ ಕಿಡ್ನಾಪ್ ಆದಾಗ ಆಕೆ ಎದುರಿಸುವ ಪರಿಸ್ಥಿತಿ ಎಂತಹದ್ದು,, ಕಿಡ್ನಾಪರ್ ಉದ್ದೇಶ, ಹಿನ್ನೆಲೆ ಏನು ಎಂಬುವುದು ಈ ಸಿನಿಮಾದ ಸಾರಾಂಶವಾಗಿದೆ. ಬೆಂಗಳೂರು, ಮಾಗಡಿ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಕಥೆ, ಚಿತ್ರಕಥೆ ನಾನೇ ಬರೆದಿದ್ದು, ವಸಂತರಾವ್ ಎಂ. ಕುಲಕರ್ಣಿ & ಪುನೀತ್ ನಾಗಾರಾಜು ನಿರ್ಮಾಪಕರಾಗಿದ್ದಾರೆ. ಛಾಯಾಗ್ರಹಣ ರಿಜೋ ಪಿ ಜಾನ್ ಅವರು ಛಾಯಾಗ್ರಹಣ ಚಿತ್ರಕ್ಕಿದೆ. ಸಂಗೀತ ನಿರ್ದೇಶನ ಸ್ಯಾಂಡೀ ಅದ್ದಂಕಿ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು.ನಾಯಕ ಅನೂಪ್‌ ರೇವಣ್ಣ ಮಾತನಾಡಿ, ಇದು ನನ್ನ 4ನೇ ಚಿತ್ರವಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಮಾರ್ಚ್ 15 ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಎಲ್ಲರೂ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು. ನಾಯಕಿ  ಧನ್ಯ ರಾಮ್‌ಕುಮಾ‌ರ್ ಮಾತನಾಡಿ, ನಿರ್ದೇಶಕ ಪುನೀತ್ ನಾಗರಾಜ್ ತುಂಬಾ ಪ್ಯಾಶನೇಟ್ ನಿರ್ದೇಶಕರಾಗಿದ್ದು, ರಿವರ್ಸ್ ಸ್ಕ್ರೀನ್ ಪ್ಲೇ ಮೆಥೆಡ್ ನಲ್ಲಿ ಚಿತ್ರ ಮಾಡಿದ್ದಾರೆ. ಸಸ್ಪೆನ್ಸ್ ಚಿತ್ರದ ಕೊನೆಯವರೆಗೂ ಗಟ್ಟಿಯಾಗಿ ನಿಲ್ಲಲಿದೆ ಎಂದು ಹೇಳಿದರು. ಹಾಗೂ ತಮ್ಮ ತಾಯಿ ಪೂರ್ಣಿಮಾ ಅವರು ಸದಾ ನನ್ನೊಂದಿಗಿದ್ದು  ಸಪೋರ್ಟ್  ಮಾಡುತ್ತಿದ್ದಾರೆ ಎಂದು ಹೇಳಿದರು.ತಾರಾ ಬಳಗದಲ್ಲಿ ಅರವಿಂದ್‌ರಾವ್, ರಾಜೇಶ್ ನಟರಂಗ, ಕೃಷ್ಣ ಹೆಬ್ಬಾಳೆ, ಬಲರಾಜವಾಡಿ, ರಕ್ಷಾ ಉಮೇಶ್, ಸೂರಜ್ (ಕಾಮಿಡಿ ಕಿಲಾಡಿ), ಮೈತ್ರಿ ಜಗ್ಗಿ ಇನ್ನಿತರರು ಇದ್ದಾರೆ ಎಂದರು.