
ದಾವಣಗೆರೆ.ಮಾ.12; ಎ.ಜೆ ಸದಾಶಿವ ಆಯೋಗದ ವರದಿ ಕೂಡಲೇ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಮಾ.೧೩ ರಂದು ಬೆಳಗ್ಗೆ ೧೧ ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ತಮಟೆ ಮತ್ತು ಡೊಳ್ಳುಗಳ ಮುಖಾಂತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಎಸ್.ಅಡಿವೆಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಬೇಡಿಕೆಗಳಾದ ದಾವಣಗೆರೆ ಜಿಲ್ಲೆಯಲ್ಲಿ ನೂತನವಾಗಿ ಆಗುತ್ತಿರುವ ಕೆಎಸ್ ಆರ್ ಟಿಸಿ ಸರ್ಕಾರಿ ಬಸ್ ನಿಲ್ದಾಣಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಹೆಸರನ್ನು ಕಡ್ಡಾಯವಾಗಿ ಇಡಬೇಕು.ದಲಿತ ಹೋರಾಟಗಾರರಿಗೆ ಕಡ್ಡಾಯವಾಗಿ ನಿವೇಶನ ನೀಡಬೇಕು, ಬೇಡ ಜಂಗಮರ ನಕಲಿ ಜಾತಿ ಪ್ರಮಾಣಪತ್ರವನ್ನು ವಿರೋಧಿಸಬೇಕು.ರಾಜ್ಯಾದ್ಯಂತ ನಡೆಸುತ್ತಿರುವ ಎಸ್ ಸಿ, ಎಸ್ ಟಿ ಪತ್ರಿಕೆ ಸಂಪಾದಕರುಗಳಿಗೆ ಜಾಹೀರಾತು ಬಿಡುಗಡೆ ಮಾಡಬೇಕು.ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇರುವ ಡಿ ಗ್ರೂಪ್ ಹೊರ ಗುತ್ತಿಗೆ ನೌಕರರ ವೇತನ ಹೆಚ್ಚಿಸಬೇಕು ಹಾಗೂ ಸೇವೆ ಖಾಯಂಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮಂಜುನಾಥ್ ಕುಂದವಾಡ,ಎಸ್ ಅಡಿವೆಪ್ಪ,ಮಂಜುನಾಥ್, ಬಿ.ನಿಂಗಪ್ಪ,ರೇವಣಸಿದ್ದಪ್ಪ ಅಭಿನಾಷ್ ಮತ್ತಿತರರಿದ್ದರು.