
ದಾವಣಗೆರೆ. ಮಾ.೧೦; ಯಶೋಧ ಪುಸ್ತಕ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಮಾ.೧೨ ರಂದು ಬೆಳಗ್ಗೆ ೧೦ ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ಉಪನ್ಯಾಸಕ ಜಿ.ಆರ್.ರೇವಣಸಿದ್ದಪ್ಪ ಬಾಳನೌಕೆಗೆ ಬೆಳಕಿನ ದೀಪ ಕವನಸಂಕಲನ ಲೋಕಾರ್ಪಣೆ ನಡೆಯಲಿದೆ ಎಂದು ಸಾಹಿತಿ ಪಾಪುಗುರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಎಚ್.ವಿ ವಾಮದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.ಜಾನಪದ ತಜ್ಞ ಪ್ರೊ.ಕೆ.ಎಸ್ ಈಶ್ವರಪ್ಪ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.ಸಾಹಿತಿ ಡಾ.ಆನಂದ್ ಋಗ್ವೇದಿ ಪುಸ್ತಕ ಕುರಿತು ಮಾತನಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಸಿ ಗೌರಿಶಂಕರ್ ಆಗಮಿಸಲಿದ್ದಾರೆ.ಕವನ ಸಂಕಲನವು ೪೪ ಕವನಗಳನ್ನೊಳಗೊಂಡಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿ.ಆರ್ ರೇವಣಸಿದ್ದಪ್ಪ,ಸಿ.ಎನ್ ಜಗದೀಶ್,ಹೆಚ್.ಎಂ ಜಯಣ್ಣ,ಜಿ.ಟಿ ಮಧು ಉಪಸ್ಥಿತರಿದ್ದರು.