ಮಾ. ೧೧ ರಿಂದ ರಾಘವೇಂದ್ರ ಗುರುಸಾರ್ವಭೌಮೋತ್ಸವ

ರಾಯಚೂರು (ಮಂತ್ರಾಲಯ), ಮಾ. ೪- ಮಾರ್ಚ್ ೧೧ ರಿಂದ ೧೬ರವರೆಗೆ ಮಂತ್ರಾಲಯ ಶ್ರೀ ಮಠದಲ್ಲಿ ಶ್ರೀ ರಾಘವೇಂದ್ರ ಗುರು ವೈಭೋವತ್ಸವ ಜರುಗಲಿದೆ. ಮಠದ ಆಡಳಿತ ಮಂಡಳಿ ತಿಳಿಸಿದೆ. ಮಾ. ೧೨ ರಂದು ೪೦೩ನೇ ಪಟ್ಟಾಭೀಷೇಕ ಮಹೋತ್ಸವ, ಮಾ.೧೬ ರಂದು ೪೨೯ನೇ ವರ್ಧಂತಿ ಉತ್ಸವ ನಡೆಯಲಿದೆ. ಈ ಕಾರ್ಯಕ್ರಮ ೧೦೮ ಶ್ರೀ ಸುಯೇತೆಂದ್ರ ತೀರ್ಥ ಸ್ವಾಮಿಗಳ ಆಶೀರ್ವಾದಗಳೊಂದಿಗೆ ಹಾಗೂ ಮಂತ್ರಾಲಯದ ಪೀಠಾಧಿಪತಿ ಸುಬುದೇಂದ್ರ ತೀರ್ಥ ಶ್ರೀಗಳ ನೇತೃತ್ವದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಮಾ. ೧೧ ರಂದು ವಿದ್ವಾನ್ ಪುರೋಹಿತ್, ೧೨ ರಂದು ವಿದ್ವಾನ್ ಆನಂದಚಾರ್ಯ ದಿವಾಂಜಿ, ೧೩ ರಂದು ವಿದ್ವಾನ್ ಅರವಿಂದ್ ಆಚಾರ್ಯ, ೧೪ ರಂದು ವಿದ್ವಾನ್ ಸತೀಶ ಆಚಾರ್ಯ, ೧೫ ರಂದು ವಿದ್ವಾನ್ ಶಶಿಧರ್ ಆಚಾರ್ಯ, ೧೬ ರಂದು ವಿದ್ವಾನ್ ಮನಕರಿ ಸುಮುಖ ಆಚಾರ್ಯ ಅವರಿಂದ ಜ್ಞಾನಯಜ್ಞ ಜರುಗಲಿದೆ. ಅನೇಕ ಗಣ್ಯರಿಗೆ ಗುರುವೈಭೋವತ್ಸವಂ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.