
ರಾಯಚೂರು,ಮಾ. ೦೬-
ನಗರದ ಮೊಟ್ಟ ಮೊದಲ ಡಯಲಸಿಸ್ ಸೆಂಟರ್ ಎಂಬ ಕೀರ್ತಿಗೆ ಪಾತ್ರರಾದ ಎಂ ಕೆ ಬಂಡಾರಿ ಆಸ್ಪತ್ರೆಯ ವತಿಯಿಂದ ದಿನಾಂಕ ೦೯/೦೩/೨೦೨೩ರಂದು ಎಂ ಕೆ ಬಂಡಾರಿ ಆಸ್ಪತ್ರೆ ಹಾಗೂ ರಾಯಚೂರು ವೈದ್ಯಕೀಯ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿದ್ಯಾಲಯ ಆಡಿಟೋರಿಯಂನಲ್ಲಿ ವರ್ಡ್ ಕಿಡ್ನಿ ಡೇ ಯನ್ನು ಆಚರಿಸಲಾಗುತ್ತಿದೆ ಎಂದು ವೈದ್ಯಕೀಯ ನಿರ್ದೇಶಕರಾದ ಡಾ. ಆನಿರುದ್ ಕುಲಕರ್ಣಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ವರ್ಲ್ಡ್ ಕಿಡ್ನಿ ಡೇ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳು ಕೂಡ ಭಾಗವಹಿಸುತ್ತಿದ್ದಾರೆ ಹಾಗೂ ಹೈದರಾಬಾದ್ ನ ಮಹಾವೀರ ಡಯಾಲಿಸಿಸ್ ಸೆಂಟರ್ ಅಧಿಕಾರಿಗಳು, ರಾಯಚೂರು ವೈದ್ಯಕೀಯ ಅಧ್ಯಕ್ಷರು ಭಾಗವಹಿಸುತ್ತಿದ್ದಾರೆ ಎಂ ಕೆ ಬಂಡಾರಿ ಆಸ್ಪತ್ರೆಯ ಕಿಡ್ನಿ ತಜ್ಞರಾದ ಡಾಕ್ಟರ್ ವಿನಯ್ ಕುಮಾರ್ ಬದ್ರಿ ಅವರು ಕಾರ್ಯಕ್ರಮದಲ್ಲಿ ಕಿಡ್ನಿ ಆರೋಗ್ಯದ ಕುರಿತು ತಿಳುವಳಿಕೆ ನೀಡಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.