ಮಾ‌೧೧ ಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭೇಟಿ

ಹರಪನಹಳ್ಳಿ.ಮಾ.೭ : ಇಲ್ಲಿನ ಪ್ರವಾಸಿ ಮಂದಿರದಲ್ಲಿ ಎ.ನಾರಾಯಣಸ್ವಾಮಿ ಅಭಿಮಾನ ಬಳಗ ತಾಲ್ಲೂಕು ಘಟಕ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜನಪದ ತಮಟೆ ಕಲಾವಿದ ಪಿಂಡಿ ಪಾಪನಹಳ್ಳಿ ನಾಡೋಜ ಮುನಿ ವೆಂಕಟಪ್ಪ ಇವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕೆಡಿಪಿ ನಾಮ ನಿರ್ದೇಶಕ ಸದ್ಯಸೆ ಹಾಗೂ ಹಿರಿಯ ಬಿಜೆಪಿ ಮುಖಂಡ ಕಣಿವಿಹಳ್ಳಿ ಮಂಜುನಾಥ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದಅವರು ಮಾರ್ಚ್ 11. ರಂದು ಮುನಿ ವೆಂಕಟಪ್ಪ ಸನ್ಮಾನದ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ನಮ್ಮ ಹರಪನಹಳ್ಳಿ ತಾಲ್ಲೂಕಿಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಯವರು ಆಗಮಿಸುತ್ತಿರುವುದು ನಮ್ಮೆಲ್ಲರಿಗೂ ತುಂಬಾ ಸಂತೋಷದ ವಿಚಾರ ನಮ್ಮ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಸಮಾಜದ ಬಾಂಧವರಿಗೆ ಮನವಿ ಮಾಡಿದರು ಹಾಗೂ ನಮ್ಮ ಸಮಾಜದ ಹಿರಿಯ ತಮಟೆ ಕಾಲವಿದ ಮುನಿ ವೆಂಕಟಪ್ಪ ಇವರಿಗೆ ಕೇಂದ್ರ ಸರ್ಕಾರದಿಂದ ಸಿಗುವ ಪದ್ಮಶ್ರೀ ಪ್ರಶಸ್ತಿ ಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ ಹಾಗಾಗಿ ನಮ್ಮ ಹಿರಿಯ ಕಲಾವಿದನಿಗೆ ಸಮಾಜದ ವತಿಯಿಂದ ಬಹಳ ಅದ್ದೂರಿ ಸನ್ಮಾನವನ್ನು ಮಾಡಲಿಕ್ಕೆ ನಮ್ಮ ತಾಲ್ಲೂಕಿನ ಸಮಾಜದವರು ಬಹಳ ಉತ್ಸಾಹಕರಾಗಿ ಕಾಯುತ್ತಿದ್ದಾರೆ ಐ.ಬಿ ಸರ್ಕಲ್ ನಿಂದ ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ಮುಖಾಂತರಡಾಕ್ಟರ್ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ಬೆಳಿಗ್ಗೆ 10:30ಕ್ಕೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಈ ಕಾರ್ಯಕ್ರಮಕ್ಕೆ ಸುಮಾರು 5- 6 ಸಾವಿರ ಜನ ಸೇರುವ ನಿರೀಕ್ಷೆ ಇದೆ ಈ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಮಾಡಬೇಕಾಗಿದೆ ಬಂದAತಹ ಸಮಾಜದ ಎಲ್ಲರಿಗೂ ಊಟದ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು