ಮಾಹಿತಿ ಹಕ್ಕು ಹೋರಾಟಗಾರನ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಆಗ್ರಹ

ಜಗಳೂರು.ಜ.೧೦ : ಮಾಹಿತಿ ಹಕ್ಕು ಹೋರಾಟಗಾರ ಗೌರಿಪುರ ರಾಮಕೃಷ್ಣ ಹತ್ಯೆ ಮಾಡಲು ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಮೊದಲನೇ ಆರೋಪಿ ಆಗಿರುವ ಪಂಚಾಯಿತಿ ಅಬಿವೃದ್ದಿ ಅಧಿಕಾರಿ ಎ.ಟಿ.ನಾಗರಾಜ್ ಅವರು ಹಾಗೂ ಸಹಚರರನ್ನ ಕೂಡಲೇ ಬಂದಿಸಿ ಪ್ರಕರಣದ ತನಿಖೆಯನ್ನ ಸಿ.ಬಿ.ಐ.ಗೆ ವಹಿಸಬೇಕೆಂದು ಒತ್ತಾಯಿಸಿ  ತಾಲ್ಲೂಕು ನಾಯಕ ಸಮಾಜ ಹಾಗು ದಲಿತ ಸಂಘರ್ಷ ಸಮಿತಿ ಯಿಂದ ತಹಶೀಲ್ದಾರ್ ಹಾಗು ಪೋಲಿಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು ತಾಲ್ಲೂಕು ನಾಯಕ ಸಮಾಜದ ಕಾರ್ಯದರ್ಶಿ ಸೂರಲಿಂಗಪ್ಪ ಮಾತನಾಡಿ ಶನಿವಾರ  ಸಂಜೆ ಹೊಸಕೆರೆ‌ ಸಮೀಪದ ಡಾಬಾ ವೊಂದರಲ್ಲಿ ಉಟ ಮಾಡುವ ನೆಪವಾಗಿ ರಾಮಕೃಷ್ಣ ಅವರನ್ನ ಕರಸಿಕೊಂಡು ಹತ್ಯೆ ಮಾಡಲಾಗಿದೆ ಈ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಈಗಾಗಲೇ ಇಬ್ಬರು ಆರೋಪಿಗಳು ಶರಣಾಗತಿಯಾಗಿದ್ದರು ಆದರೆ ಕೊಲೆ ಪ್ರಕರಣದ ಪ್ರಮುಖ ಮೊದಲನೇ ಆರೋಪಿ ಪಿ.ಡಿ.ಒಎ.ಟಿ ನಾಗರಾಜ್ ತಲೆ ಮರಿಸಿಕೊಂಡಿದ್ದು ಕೂಡಲೇ ಬಂದಿಸದಿದ್ದರೇ ಜಗಳೂರು ಪಟ್ಟಣದ ಬಂದ್ ಮಾಡಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು ಡಿ.ಎಸ್.ಎಸ್  ಸಂಚಾಲಕ ಬಿ ಸತೀಶ್ ಮಾತನಾಡಿ ತಾಲೂಕಿನಲ್ಲಿ ಭ್ರಷ್ಟಾಚಾರ ವಿರುದ್ದ ಹೋರಾಟ ಮಾಡುವಂತಹ ಮಾಹಿತಿ ಹಕ್ಕು ಕಾರ್ಯಕರ್ತರು , ಪ್ರಗತಿಪರ ಹೋರಾಟ ಗಾರ , ವಿವಿದ ಸಂಘಟನೆಗಳ ಮುಖಂಡರಿಗೆ ಭದ್ರತೆ ಇಲ್ಲದಂತಾಗಿದೆ ಗ್ರಾಮ ಪಂಚಾಯತಿಯ ನರೇಗಾ ಯೋಜನೆ ಹಾಗು 15 ನೇ ಹಣಕಾಸು ಯೋಜನೆಯ ಭ್ರಷ್ಟಾಚಾರ ಬಯಲು ಮಾಡಿ ತಪ್ಪಿತಸ್ಥರಿಗೆ ಕಾನುನು ಕ್ರಮ ಆಗುವಂತೆ ಹೋರಾಟ ಮಾಡಿದ  ದಲಿತ ಯುವಕ ರಾಮಕೃಷ್ಣ ಅವರನ್ನ ಕೊಲೆ ಮಾಡಿರುವುದು ಖಂಡನೀಯ ಈ ಘಟನೆಯ ಪ್ರಮುಖ ಆರೋಪಿ ಪಿ.ಡಿ.ಓ  ಎ.ಟಿ. ನಾಗರಾಜ್ ಅವರನ್ನ ಸೇವೆಯಿಂದ ವಜಾಗೊಳಿಸಿ ತಪ್ಪಿತಸ್ಥರ ವಿರುದ್ದ ಕಾನುನು ಕ್ರಮ ಜರುಗಿಸಬೇಕು ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಇಲ್ಲ ವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು ಯಾವುದೋ ಒಬ್ಬ ಸಂಘ ಪರಿವಾರದ ಕಾರ್ಯಕರ್ತರು ಹತ್ಯೆ ಆದರೆ ಕೋಟಿಗಟ್ಟಲೇ ಪರಿಹಾರ ನೀಡುವ ಬಿಜೆಪಿ ಸರ್ಕಾರ ದಲಿತ ಯುವಕ ಹತ್ಯೆಯಾದರೆ ಕನಿಷ್ಠ ಸ್ವಾಂತಾನ ಹೇಳದ ಜನಪ್ರತಿನಿಧಿಗಳು ಹಾಗು ಸರ್ಕಾರದ ನಡೆ ದುರದುಷ್ಟಕರ ಎಂದರು ವಕೀಲ ಆರ್ ಓಬಳೇಶ್ ಮಾತನಾಡಿ ತಾಲೂಕಿನಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ ಅಕ್ರಮಗಳ ಬಗ್ಗೆ ಪ್ರೆಶ್ನೆ ಮಾಡುವವರನ್ನ ಗುರಿಯಾಗಿಸಿ ಈ ರೀತಿ ಕೃತ್ಯ ಮಾಡಲಾಗುತ್ತಿದೆ ಒಬ್ಬ ಸಾಮಾನ್ಯ ಪಿ.ಡಿ.ಓ ಐದಾರು ಬಾರಿ ಅಮಾನತ್ತು ಆಗಿ ವಿವಿದ ಕೇಸ್ ಗಳ ವಿಚಾರಣೆ ಇದ್ದರೂ ಮತ್ತೆ ಇದೇ ತಾಲ್ಲೂಕಿಗೆ ವರ್ಗಾವಣೆ ಆಗಿ ಬಂದಿದ್ದಾನೆ    ಇಂತಹವನಿಗೆ ಮೂರು ನಾಲ್ಕು ಪಂಚಾಯಿತಿ ಜವಾಬ್ದಾರಿ ಕೊಟ್ಟಿದ್ದಾರೆ  ಅಕ್ರಮ ಹಣದಿಂದ ಬೇನಾಮಿ ಆಸ್ತಿ ಮಾಡಿಕೊಂಡು ಪುಡಿರಾಜಕಾರಣಿ ಗಳ ಗುಂಪು ಕಟ್ಟಿಕೊಂಡು ಮೆರೆಯುತ್ತಿದ್ದಾನೆ ಎಲ್ಲಾ ಪಂಚಾಯಿತಿಗಳಲ್ಲಿ ಕೋಟಿ ಕೋಟಿ ಅಕ್ರಮ ಎಸಗಿದ್ದಾನೆ ರಾಜಕಾರಣಿಗಳಿಗೆ ಹಣದ ಆಸೆ ತೋರಿಸಿ ಅವರ ಬಲಗೈ ಬಂಟನಂತೆ ಇರುವ ಎ.ಟಿ.ನಾಗರಾಜ ಬೆಳೆಯಲು ಕಾರಣವೇ ರಾಜಕಾರಣಿಗಳು ಇಂದು ಅಮಾಯಕನ ಜೀವ ಕಳೆದು ಕೊಂಡಿದ್ದೇವೆ ಮುಂದೆ ಇಂತಹ ಕೃತ್ಯ ನೆಡೆಯದಂತೆ ಭ್ರಷ್ಟಚಾರ ವಿರುದ್ದ ಹೋರಾಟ ಮಾಡುವವರಿಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ  ನಾಯಕ ಸಮಾಜದ ಮುಖಂಡರಾದ ಮಾಜಿ ಕಾರ್ಯದರ್ಶಿ ಬಿ.ಲೋಕೇಶ್ ಮಾಜಿ ತಾ.ಪಂ. ಸದಸ್ಯರಾದ  ಡಿ.ಆರ್. ಹನುಮಂತಪ್ಪ  ಕಾನನಕಟ್ಟೆ  ಕುಬೇಂದ್ರಪ್ಪ , ಮಾಜಿ ಪ.ಪಂ. ಸದಸ್ಯ ಮಹೇಂದ್ರ , ಭೋವಿ ಸಮಾಜದ ಮುಖಂಡ ದೇವರಾಜ್ , ಪಿ ರೇವಣ್ಣ , ಬುಳ್ಳನಹಳ್ಳಿ ನಾಗರಾಜ್ , ಸಿದ್ದಣ್ಣ ,ಶಿವಮೂರ್ತಿ , ಶ್ರೀನಿವಾಸ್  ,ಯುವ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಟಿ. ತಿಪ್ಪೇಸ್ವಾಮಿ ,ವಿಜಯ್ , ದ್ವಾವೇಶ್  ವೆಂಕಟೇಶ್ , ಅನಿಲ್ ,   ದಲಿತ ಸಂಘರ್ಷ ಸಮಿತಿ ಪಧಾದಿಕಾರಿಗಳು ಜೀವನ್ , ಪ್ರದೀಪ್ , ಉಮೇಶ್ , ಸೇರಿದಂತೆ ಹಲವರು ಇದ್ದರು