ಮಾಹಿತಿ ಹಕ್ಕು ಕಾರ್ಯಕರ್ತರ ಆಟ ನಡೆಯಲ್ಲಶಾಸಕರ ಹೇಳಿಕೆಗೆ ಆಕ್ಷೇಪ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.25: ನಗರದಲ್ಲಿ ಇನ್ನು ಮುಂದೆ ಮಾಹಿತಿ ಹಕ್ಕು ಕಾರ್ಯಕರ್ತರ ಆಟ ನಡೆಯಲ್ಲ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಹೇಳಿಕೆಗೆ ರಾಜ್ಯ ಮಾಹಿತಿ‌ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಆಸ್ತಕ್ಷೇಪವೆತ್ತಿದೆ.
ವೇದಿಕೆಯ ಅಧ್ಯಕ್ಷ ಹೆಚ್.ಜಿ.ರಮೇಶ್ ಕುಣಿಗಲ್ ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರು ಸಂವಿಧಾನ ಬದ್ದವಾಗಿ ರಚನೆಗೊಂಡಿರುವ ಮಾಹಿತಿ ಹಕ್ಕು ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಾರೆ.
ಜಾರಿಗೆ ಬಂದು ಎಲ್ಲಾ ದಾಖಲೆಗಳನ್ನು ಡಿಜಟಲೀಕರಣಗೊಳಿಸಲು ಕೆಲವು ವರ್ಷ ಅವಕಾಶ ನೀಡಿತ್ತು. ಅನೇಕ ವರ್ಷಗಳು ಕಳೆದರೂ ಸಹ ಇಲ್ಲಿವರೆಗೂ ಬಹುತೇಕ ದಾಖಲೆಗಳು ಡಿಜಿಟಲೀಕರಣ ಆಗಿಲ್ಲ.
ಕೆಸಿಎಸ್‌ಆರ್ ನಿಯಮಾವಳಿಯಂತೆ  ಪಾರದರ್ಶಕ ಆಡಳಿತ ಇರಬೇಕು. ನ್ಯಾಯಾಲಯದ ಅದೇಶ,  ಸರ್ಕಾರದ ಸುತ್ತೋಲೆ ಹಾಗೂ ಅದೇಶಗಳನ್ನು ಪರಿಪಾಲನೆ ಮಾಡುವುದು, ಕಾರ್ಯಾಂಗದ ಸಂವಿಧಾನ ಬದ್ದ ಜವಾಬ್ದಾರಿಯುತ ಕೆಲಸವಾಗಿದೆ.
ಇಂತಹ ಕೆಲಸಗಳನ್ನು ಸರಿಯಾಗಿ ಮಾಡದೆ ಇರುವಾಗ ದಾಖಲೆಗಳನ್ನು ಸರಿಯಾಗಿ ಮಾಡಿಟ್ಟುಕೊಳ್ಳದೆ.  ಕರ್ತವ್ಯ ಉಲ್ಲಂಘನೆ ಮಾಡಿರುವ ಅಧಿಕಾರಿಗಳು ಮಾಹಿತಿ ಹಕ್ಕಿನ ಅಡಿ ಕೇಳುವ ದಾಖಲಾತಿಗಳನ್ನು ನೀಡಲಾಗದೆ ನಗರದ ಶಾಸಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದಂತಿದೆ.
ಮಾಹಿತಿ ಹಕ್ಕು ಕಾರ್ಯಕರ್ತರ ವಿರುದ್ದ   ದಾರಿ ತಪ್ಪಿಸುವ ಮತ್ತು ಪ್ರಚೋದನೆ ಮಾಡುವಂತಹ ಹೇಳಿಕೆ ಖಂಡನೀಯ ಎಂದರು.
ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುತ್ತಿರುವ ಕಾರ್ಯಾಂಗವನ್ನು ಹಾಗು ನಮ್ಮ ಸಂವಿಧಾನದ ಅಧಿಕಾರದಿಂದ ಆಡಳಿತ ನಡೆಸುವ ಜನಪ್ರತಿನಿಧಿಗಳು
ಕ್ಷೇತ್ರದ ಅಭಿವೃದ್ಧಿಗೆ ಪುರಕವಾಗಿ ಕರ್ತವ್ಯ ಮಾಡಬೇಕಿದೆಂದರು.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಎಲ್ಲವೂ  ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತದೆ. ಆಗಿದ್ದಾಗಲೂ ಯಾರೂ ಕೂಡ ಸಂವಿಧಾನದ ವ್ಯಾಪ್ತಿ ಮೀರುವಂತಿಲ್ಲ ಎಲ್ಲಾ ಕ್ಷೇತ್ರದಲ್ಲೂ ಸಹ ಇರುವಂತೆ ಕೆಲವರು ಅಪ್ರಾಮಾಣಿಕರೂ ಇರುತ್ತಾರೆ. ಮಾಹಿತಿ ಮತ್ತು ಕಾಯ್ದೆಯನ್ನು ಬಳಸಿ ಭ್ರಷ್ಟಾಚಾರಕ್ಕೆ ಇಳಿಯುವ ಯಾವುದೇ ವ್ಯಕ್ತಿಯನ್ನು ಗುರುತಿಸಿ ದೂರು ನೀಡಿ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಲಿ. ಅದು ಬಿಟ್ಟು ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ನ್ಯಾಯಾಲಯದ ಅದೇಶ ಸರ್ಕಾರದ ಆದೇಶ ಹಾಗೂ ಇಲಾಖೆಗಳ ಸುತ್ತೋಲೆಗಳು ಪರಿಪಾಲಿಸುವಂತೆ ದಾಖಲೆಗಳನ್ನು ತಂದು ಪ್ರತಿಭಟನೆಯಂತಹ ಹಾಗೂ ಕಾನೂನು ಹೋರಾಟಗಳನ್ನು ಮಾಡುತ್ತಿರುವ ಪ್ರಾಮಾಣಿಕ ಹೋರಾಟಗಾರರಿಗೆ ಇಂತಹ
ಹೇಳಿಕೆಗಳಿಂದ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ  ಪ್ರೇರೇಪಿಸಿದಂತಾಗುತ್ತದೆ.
ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಆದರೂ  ಸಹ ಈವರೆಗೆ ಅನೇಕ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಹಲ್ಲೆಗಳಾಗಿವೆ. ಪ್ರಾಣ ಹಾನಿಗಳಾಗಿದೆ. ಆದ್ದರಿಂದ ಇಂತಹ ಹೇಳಿಕೆಗಳು ಮತ್ತಷ್ಟು ಪ್ರಾಣ ಹಾನಿಗೆ ಕಾರಣವಾಗಬಾರದೆಂದು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಟಿಹೆಚ್.ಎಂ.ರಾಜಕುಮಾರ್, ಚೆನ್ನಯ್ಯ ವಸ್ತ್ರದ್, ಕೆಂಚಪ್ಒ, ಮಂಜು ಮೊದಲಾದವರು ಇದ್ದರು.