ಮಾಹಿತಿ ಸಿಗದ ಮಾಹಿತಿ ಕೇಂದ್ರ :ಆರೋಪ

ಕಲಬುರಗಿ ಏ 22: ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಸುಮಾರು 22 ಕೋವಿಡ್ 19 ಸಹಾಯ ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ. ಆದರೆ ಆ ಕೇಂದ್ರದಲ್ಲಿ ಯಾವುದೇ ಮಾಹಿತಿ ಸಿಗದೆ ಜನರು ಪರದಾಡುತ್ತಿದ್ದಾರೆ. ಇ0ತಹ ಮಾಹಿತಿಯೇ ಸಿಗದ ಮಾಹಿತಿ ಕೇಂದ್ರ ಏಕೆ ಬೇಕೆಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ ಎಂದು ಅಖಿಲ ಭಾರತ ಯುವಜನ ಒಕ್ಕೂಟ (ಎಐವೈಎಫ್)ಜಿಲ್ಲಾಧ್ಯಕ್ಷ ಹಣಮಂತರಾಯ ಎಸ. ಅಟ್ಟೂರ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಯವರ ಸಭೆಯಲ್ಲಿ ಒಬ್ಬರು ಕೋವಿಡ ಸುರಕ್ಷಾ ಚಕ್ರ ಆರೋಗ್ಯ ಕಾರ್ಯಕತ9, ಇಬ್ಬರು ಶಿಕ್ಷಕರು ಹಾಗೂ ಒಬ್ಬರು ಪೊಲೀಸ ಅಥವಾ ಹೋಮ ಗಾಡ9 ಇರಬೇಕೆಂದು ಆದೇಶಿಸಿದ್ದಾರೆ.ಇಲ್ಲಿ ಸರಿಯಾಗಿ ಮಾಹಿತಿ ಕೊಡುವ ಮಾಹಿತಿದಾರರೇ ಇಲ್ಲ. ನಗರದಲ್ಲಿ ಕೋವಿಡ ಆಸ್ಪತ್ರೆಗಳಲ್ಲಿ ಖಾಲಿಯಿರುವ ಬೆಡ್‍ಗಳು ಎಷ್ಟು ಇತ್ಯಾದಿ ಮಾಹಿತಿ ಸಿಗುತ್ತಿಲ್ಲ. ಹಲವಾರು ಸಹಾಯ ಕೇಂದ್ರಗಳಲ್ಲಿ ಹೋಮ್ ಗಾರ್ಡಗಳಾಗಲಿ, ಆರೋಗ್ಯ ಸುರಕ್ಷಾ ಚಕ್ರದ ಕಾರ್ಯಕರ್ತರಾಗಲಿ ಇರುವದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡುವದರೊ0ದಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.