ಮಾಹಿತಿ ಕೋಶ ರಚನೆಗೆ ಜಾನಪದ ಕಲಾವಿದರಿಂದ ಅರ್ಜಿ ಆಹ್ವಾನ

ಅಫಜಲಪುರ:ಜ.6: ಕರ್ನಾಟಕ ಜಾನಪದ ಪರಿಷತ್ ರಾಜ್ಯ ಘಟಕದ ಆದೇಶದ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳ ವತಿಯಿಂದ ಜಾನಪದ ಕಲಾವಿಧರ ಕೈಪಿಡಿ ರಚನೆಗೆ ಮುಂದಾಗಿದ್ದು ಅಫಜಲಪುರ ತಾಲೂಕಿನಲ್ಲಿರುವ ಜಾನಪದ ಕಲಾವಿಧರ ಕೈಪಿಡಿ ರಚನೆಗೆ ತಾಲೂಕಿನ ಎಲ್ಲಾ ಪ್ರಕಾರದ ಜಾನಪದ ಕಲಾವಿಧರಿಂದ ಅರ್ಜಿಗಳನ್ನು ಆವ್ಹಾನಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅದ್ಯಕ್ಷ ಡಾ. ಸಂಗಣ್ಣ ಎಂ ಸಿಂಗೆ ಆನೂರ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಾಲೂಕಿನಲ್ಲಿ ಸಾಕಷ್ಟು ಜನ ಪ್ರತಿಭಾವಂತ ಜಾನಪದ ಕಲಾವಿಧರಿದ್ದಾರೆ. ವಿಶೇಷವಾಗಿ ಬಯಲಾಟದ ಕಲಾವಿದರು ಇದ್ದಾರೆ. ಆದರೆ ಅವರಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಅವರನ್ನೆಲ್ಲ ಮುನ್ನೆಲೆಗೆ ತಂದು ಅವರಲ್ಲಿರುವ ಕಲೆಯನ್ನು ನಾಡಿಗೆ ಪರಿಚಯಿಸುವ ಉದ್ದೇಶದಿಂದ ಕೈಪಿಡಿ ರಚನೆಗೆ ಮುಂದಾಗಿದ್ದೇವೆ. ಈ ಕೈಪಿಡಿ ರಾಜ್ಯ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರ ಸಂಪಾದಕತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೈಪಿಡಿಗಳು ಹೊರ ತರಲಾಗುತ್ತಿದೆ. ಹೀಗಾಗಿ ತಾಲೂಕಿನ ಕಲಾವಿದರು ಅಫಜಲಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂಬದಿಯ ಮುತ್ತೂಟ್ ಫೈನಾನ್ಸ್ ಇರುವ ಕಟ್ಟಡದ ಮೊದಲ ಮಹಡಿಯಲ್ಲಿನ ಕರ್ನಾಟಕ ಜಾನಪದ ಪರಿಷತ್ ಕಚೇರಿಯಲ್ಲಿ ಅರ್ಜಿಗಳನ್ನು ಲಭ್ಯವಿದ್ದು ಅರ್ಜಿ ಪಡೆದುಕೊಂಡು ಮಾಹಿತಿ ಬರೆದು ಅರ್ಜಿಯೊಂದಿಗೆ ಇತ್ತಿಚಿನ ಭಾವಚಿತ್ರ ಹಾಗೂ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕಾಧ್ಯಕ್ಷರ ಮೊಬೈಲ್ ಸಂಖ್ಯೆ 9900795644 ಹಾಗೂ ಮಾಶಾಳ ವಲಯದ ಹಿರಿಯ ರಂಗ ಕಲಾವಿದ ಬಾಬುಮೀಯಾ ಪುಲಾರಿ ಅವರ ಮೋಬೈಲ್ ಸಂಖ್ಯೆ 9663667048 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಲು ಮನವಿ ಮಾಡಿದ್ದಾರೆ.