
ಚಿಂಚೋಳಿ,ಮಾ.26- ಭಗವಾನ ಮಹಾವೀರ, ಗೌತಮ ಬುದ್ದ. ವಿಶ್ವಗುರು ಬಸವಣ್ಣ. ಶಿವಾಜಿ ಮಹಾರಾಜ, ಮಾಹತ್ಮ ಜ್ಯೊತಿ ಬಾಪುಲೆ ಮತ್ತು ಸಂತರು ಶರಣರು ಸಮಾಜಿಕ ಪರಿವರ್ತನೆಗಾಗಿ ಹೋರಾಟ ಮಾಡಿರುವ ಅವರ ವಿಚಾರಧಾರೆಗಳನ್ನು ಡಾ.ಬಿ.ಆರ್.ಅಂಬೇಡ್ಕರವರು ಮುಂದುವರೆಸಿ ಕಾಯ್ದೆಗಳನ್ನಾಗಿ ಮಾಡಿ ಸಂವಿಧಾನದಲ್ಲಿ ಅಳವಡಿಸಿದ್ದಾರೆಂದು ಬಾಂಸೆಪ ಮತ್ತು ಯ್ಯೂನಿಟಿ ಆಪ ಮೂಲನಿವಾಸಿ ಬಹುಜನ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ ರವರು ಹೇಳಿದರು.
ತಾಲೂಕಿನ ಕಲ್ಲೂರ ಗ್ರಾಮದಲ್ಲಿ ನಡೆದ ಮಾಹಪುರುಷರ ಜೀವನ ಸಂದೇಶ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಹತ್ಮರು ಕಂಡಂತ ಸಮಾನತೆಯ ಕನಸ್ಸು ನಾವೆಲ್ಲಾ ನನಸ್ಸು ಮಾಡಬೇಕಾದರೆ ಅವರು ಹಾಕಿಕೊಟ್ಟಂತ ಮಾರ್ಗದಲ್ಲಿ ನಡೆಯುವುದರ ಜೋತೆ ಜೋತೆಗೆ ಅವರನ್ನು ಒಂದು ಜಾತಿಗೆ ಸಿಮೀತಮಾಡ ಬಾರದು ಎಂದರು.
ಅವರ ಆಚಾರ ವಿಚಾರಗಳು ಜೀವನದಲ್ಲಿ ಅಳವಡಿಸಿಕೊಂಡು ಪ್ರಚಾರ ಪ್ರಸಾರ ಮಾಡಿದಾಗ ಮಾತ್ರ ಸಮಾಜ ಸಮಾಜ ನಿರ್ಮಾಣ ಸಾದ್ಯವೆಂದರು.
ನಂತರ ಮಾತನಾಡಿದ ಮುಖ್ಯಗುರುಗಳು ಬಾಂಸೆಪ ಸಂಘಟನೆಯ ಮುಖಂಡರಾದ ವೀರಣ್ಣಾ ಸುಗಂದಿ ರವರು ನಮ್ಮ ಅಭಿವೃದ್ಧಿ ಯಾಗುವುದು ಶಿಕ್ಷಣದಿಂದ ಮಾತ್ರ ಸಾದ್ಯ ಅದಕ್ಕಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಷ್ಠೆ ಕಷ್ಟ ಬಂದರು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ನಿಲ್ಲಿಸಬೇಡಿ ಎಂದರು.
ಗೋಪಾಲ ಗಾರಂಪಳ್ಳಿ ಅನೀಲ ಕಂಠ್ಲಿ ಶ್ರೀಶೈಲ ನಾಗಾವಿ ರೇವಣಸಿದ್ದಪ್ಪ ಸುಬೇದಾರ ಸುದರ್ಶನರೆಡ್ಡಿ ಪಾಟೀಲ್ ಮಾತನಾಡಿದರು ವೇದಿಕೆಯಲ್ಲಿ ಯಶ್ವಂತ ಮರಾಠ ವೀರೇಶ ರಾಯಪಲ್ಲಿ ಜಗನ್ನಾತ ಮ್ಯಾಕಲ್ ರಮೇಶ ಜೊನ್ನಲ್ ಅಂಜಪ್ಪಾ ಚೆನ್ನಪ್ಪ ಬೊಯಿನ್ ಝರಣಪ್ಪ ಪೂಜಾರಿ ಬಾಲಪ್ಪ ಮೇತ್ರಿ ಮೋಹನ ಐನಾಪುರ ಸುಭಾಷ ತಾಡಪಳ್ಳಿ ಹರ್ಷವರ್ಧನ ಚಿಮ್ಮನಕಟ್ಟಿ ಪ್ರತಾಪ ಗೌನಳ್ಳಿ ಆನಂದ ಕಾರ್ಯಕ್ರಮ ನಿರೂಪಿಸಿದರೆ ಅಶೋಕ ಬಾಬು ವಂದಿಸಿದರು.