ಮಾಸ್ಕ ಹಾಕದವರಿಗೆ ದಂಡ

ಮುನವಳ್ಳಿ,ಏ27: ಪಟ್ಟಣದ ಮುಖ್ಯರಸ್ತೆ, ಬಸ್ಸನಿಲ್ದಾಣದಲ್ಲಿ ಸೋಮವಾರ ಮಾಸ್ಕ ಧರಿಸದಿದ್ದವರಿಗೆ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಮತ್ತು ಹೋಟೆಲ ಒಳಗಡೆ ಸರ್ವಿಸ ಕೊಟ್ಟವರಿಗೆ ಬಟ್ಟೆ ಅಂಗಡಿ, ಬಂಗಾರ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ವಾಹನ ಸವಾರರಿಗೆ ಪುರಸಭೆ ಸಿಬ್ಬಂದಿ ಹಾಗೂ ಪೋಲಿಸರು ಸೇರಿ ದಂಡ ಹಾಕಿದರು.
ಒಟ್ಟು ಇಲ್ಲಿವರಿಗೆನ ದಂಡ ಹಣ 89000 ರೂ ಆಗಿದೆ ಎಂದು ಪುರಸಭೆಯ ಕಿರಿಯ ಆರೋಗ್ಯ ಅಧಿಕಾರಿ ಎಮ್ ಎಸ್ ಅಜಮನಿ ತಿಳಿಸಿದರು.
ವಿ ಎಸ್ ಅಂಗಡಿ, ಯಲ್ಲಪ್ಪಾ ಬಜೆಂತ್ರಿ, ಮುತ್ತು ಪಾಗಾದ, ಪುರಸಭೆ ಸಿಬ್ಬಂದಿ ಹಾಗೂ ಪೊಲೀಸರು ಉಪಸ್ಥಿತರಿದ್ದರು.