ಮಾಸ್ಕ ಸಾಮಾಜಿಕ ಅಂತರ ಸೆನಿಟೈಜರ್ ಕಡ್ಡಾಯ : ಪಟ್ಟೆದಾರ

ಶಹಾಪುರ:ಎ.22:ದೇಶದೆಲ್ಲೆಡೆ ಕೊವಿಡ್-19 ಸೊಂಕು ಶರವೇಗದಲ್ಲಿ ಹರಡುತ್ತಿದ್ದು ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮವಾದ ಮಾಸ್ಕ, ಸಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಜೀವ ಕಾಪಾಡಿಕೊಳ್ಳುವದು ನಮ್ಮ ಆಧ್ಯಕರ್ತವ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ರಮೇಶ ಪಟ್ಟೆದಾರವರು ನುಡಿದರು.

ನಗರಸಭೆ ಸಭಾಂಗಣದಲ್ಲಿ ಪತ್ರಿಕಾಗೊಷ್ಟಿ ಸಂಧರ್ಭದಲ್ಲಿ ಕಲ್ಯಾಣ ಮಂಟಪ ಟೆಂಟ್ ಮಾಲಿಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇವಲ ಸರ್ಕಾರಿ ಆಡಳಿತ ಯಂತ್ರದ ಮೇಲೆ ಕೊವಿಡ್ ನಿಯಂತ್ರಣ ಸಾಲದು ಸಾರ್ವಜನಿಕರು ಜಾಗ್ರತಿಗೊಂಡು ಕುಟುಂಬದ ಒಳಿತಿಗಾಗಿ ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಆರೋಗ್ಯ ಇಲಾಖೆ ಅಡಿಯಲ್ಲಿ ನಗರ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಕೇವಲ 50 ಆಸ್ಪತ್ರೆಗಳನ್ನು ಮಾತ್ರ ಸಜ್ಜುಗೊಳಸಿಲಾಗಿದೆ. ಅತ್ಯಂತ ಚಿಕ್ಕ ಮಟ್ಟದ ಬೆಡ್ ಗಳಿಂದ ಕೊವಿಡ್ ಸೊಂಕುಗೊಂಡವರಿಗೆ ಚಿಕಿತ್ಸೆಗೆ ತೊಂದರೆ ಉಂಟಾಗುತ್ತದೆ. ಕಾರಣ ಸ್ವಯಂ ಪ್ರೇರಣೆಯಿಂದ ಕೊವಿಡ್ ನಿಯಂತ್ರಣಕ್ಕಾಗಿ ಪಣ ತೊಡಬೆಕು. ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಮಾಸ್ಕ ಇಲ್ಲದವರಿಗೆ ದಂಡ

ನಗರದ ಪ್ರಮುಖ ಸ್ಥಳಗಳಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಪೋಲಿಸರು ಗಸ್ತು ಮಾಡಿಕೊಂಡು ಮಾಸ್ಕ ಇಲ್ಲದವರಿಗೆ ದಂಡ ವಸೂಲಿ ಮಾಡಲಾಗುತ್ತದೆ. ಅಲ್ಲದೆ ಸಮಾಜಿಕ ಅಂತರ ಕಾಪಾಡದ ಅಂಗಡಿ ಮುಗ್ಗಟ್ಟುಗಳ ಮೇಲೆ ದಂಡ ಪ್ರಹಾರ ಮುಂದುವರೆಯಲ್ಲಿದೆ. ಮಾರುಕಟ್ಟೆಗಳಲ್ಲಿ ಮಾಸ್ಕ ಇಲ್ಲದೆ ಮಾರಾಟ ಮತ್ತು ಖರೀದಿದಾರರಿಗೆ ಈ ದಂಡ ಬಿಳಿಲ್ಲದೆ. ಶುಕ್ರವಾರದ ಸಂತೆ ನಿಷೇಧ ಮಾಡುವ ಉದ್ದೇಶವಿದ್ದು, ಮುಂದೆ ತಾಲೂಕೂ ಮÀಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಾಯ ಕೈಗೊಳ್ಳಲಾಗುವದು. ಅಲ್ಲದೆ ಹೊರ ರಾಜ್ಯಗಳಿಂದ ಕುರಿ ವ್ಯಾಪಾರಕ್ಕಾಗಿ ಬರುವವರನ್ನು ಪ್ರವೇಶ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ನಂತರ ಯೋಜನಾಧಿಕಾರಿ ದೇವಿಂದ್ರ ಹೆಗಡೆಯವರು ಮಾತನಾಡಿ, ಜಿಲ್ಲಾಧಿಕಾರಿಗಳ ಸೂಕ್ತ ಮಾರ್ಗದರ್ಶನದಲ್ಲಿ ಕೈಗೊಂಡ ಕಠಿಣ ಕ್ರಮಗಳನ್ವಯ ಮದುವೆ, ಜಾತ್ರೆ, ಶವ ಸಂಸ್ಕಾರ, ಇತರೆ ಸಭೆ ಸಮಾರಂಭಗಳಿಗಾಗಿ ನಿರ್ಬಂಧ ಹೇರಲಾಗಿದೆ, ಯಾರೂ ನೀಯಮವಳಿಗಳನ್ನು ಉಲ್ಲಂಘನೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ಸಂಧರ್ಭದಲ್ಲಿ ಮುಖಂಡರಾದ ಮುಸ್ತಾಫ ದರ್ಭಾನ ಮತ್ತು ಎಲ್ಲಾ ನಗರಸಭೆ ಸದಸ್ಯರು, ಟೆಂಟ್ ಮಾಲಿಕರು. ಕಲ್ಯಾಣ ಮಂಟಪಗಳ ವ್ಯವಸ್ಥಾಪಕರು. ನಗರಸಭೆ ಅಧಿಕಾರಿಗಳು ಸಿಬ್ಬಂದಿಯವರು ಹಾಜರಿದ್ದರು.