ಮಾಸ್ಕ ಮತ್ತು ಸ್ಯಾನಿಟೈಜರ್ ವಿತರಣೆ

ಬೀದರ:ಮೇ.30: ತಾಲೂಕಿನ ಬಾವಗಿ ಹೊರವಲಯದ ಭೋವಿ ವಡ್ಡರ್ ಕಾಲೋನಿಯಲ್ಲಿ
ಶ್ರೀ ರೇವಣಸಿದ್ದೇಶ್ವರ ಕಲಾ ಸಾಂಸ್ಕೃತಿಕ ಸೇವಾ ಸಂಘ ಹಾಗು ಅಖೀಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ವತಿಯಿಂದ ಸಂಘದ ಅಧ್ಯಕ್ಷರಾದ ಶಾಂತಕುಮಾರ ಸ್ವಾಮಿ ಮಾಸ್ಕ ಮತ್ತು ಸ್ಯಾನಿಟೈಜರ್ ವಿತರಿಸಿದರು.

ನಂತರ ಶಾಂತಕುಮಾರ ಸ್ವಾಮಿ ಮಾತಾನಾಡಿ, ಜನರ ಹಿತದೃಷ್ಟಿ ಮತ್ತು ಕೊರೊನ ಜಾಗ್ರತಿ ಮೂಡಿಸುವ ಸಲುವಾಗಿ ನಮ್ಮ ಸಂಘದ ವತಿಯಿಂದ ಭೋವಿ ಸಮಾಜದ ಬಡ ಯುವಕರಿಗೆ, ಹೆಣ್ಣುಮಕ್ಕಳಿಗೆ, ಸುಮಾರು 200 ಮಾಸ್ಕ ಮತ್ತು 5 ಲೀಟರ ಸ್ಯಾನಿಟೈಜರ್ ವಿತರಿಸಿದೆವು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ ಪಕ್ಷದ ಯುವ ಮುಖಂಡ ಲೋಕೆಶ ಕನಶಟ್ಟಿ ಮಾತಾನಾಡಿಾ ರೇವಣಸಿದ್ದೇಶ್ವರ ಸಂಘ ಮತ್ತು ಗಾನಯೋಗಿ ಪಂಚಾಕ್ಷರ ಗವಾಯಿಗಳವರ ಸೇವಾ ಸಂಘ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಕಳೆದ ಲಾಕ್ ಡಾನ್ ಸಮಯದಲ್ಲಿ ಈ ಸಂಘದ ವತಿಯಿಂದ ಬಾವಗಿ ಗುರು ಭದ್ರೆಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾಸ್ಕ, ಸ್ಯಾನಿಟೈಜರ್ ವಿತರಿಸಿದರು ಕೊರೊನ ಮಾಹಮಾರಿ ರೋಗ ಓಡಿಸಲು ಪ್ರತಿಯೊಬ್ಬರು ಮಾಸ್ಕ ಧರಿಸುವುದು ಅನಿವಾರ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧಿಕಾರಿ ಸಂತೋಷ ಸ್ವಾಮಿ, ಪಂಚಾಯಿತಿ ಸದಸ್ಯರಾದ ಸಂಗಮೇಶ ಹಜ್ಜರಗಿ, ಬಾಬುರಾವ ನೆಲವಾಡ, ಮುಖಂಡರಾದ ವೀರಶಟ್ಟಿ ಭದ್ರಣ, ಕರಬಸಪ್ಪ ಟೆಂಗಸಾಲ ,ವಿಜಯಕುಮಾರ ಬಿರಾದರ ಸೇರಿ ಅನೇಕರು ಉಪಸ್ಥತರಿದ್ದರು