ಮಾಸ್ಕ ಧರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ ಸಚಿವರು

ವಿಜಯಪುರ:ಏ:23::ಜಿಲ್ಲಾ ಉಸ್ತುವಾರಿ ಸಚಿವ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ನಗರದಲ್ಲಿ ಸಂಚರಿಸಿ ಕೋವಿಡ್ ದಿಂದ ರಕ್ಷಿಸಿಕೊಳ್ಳಲು ತಪ್ಪದೇ ಮಾಸ್ಕ ಧರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರದ ಗಾಂಧಿ ವೃತ್ತ, ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಮಾರ್ಗದಲ್ಲಿ ಬಿಸಿಲು ಲೆಕ್ಕಿಸದೆ ಮಾಸ್ಕ ಧರಿಸುವ ಕುರಿತು ತಿಳಿಹೇಳಿದರು.

ಮಹಿಳೆಯರು,ಮಕ್ಕಳು ಹಾಗೂ ವೃದ್ಧರಿಗೆ ಗುಲಾಬಿ ಹೂವು ಹಾಗೂ ಮಾಸ್ಕ ನೀಡಿ, ತಮ್ಮ ಹಾಗೂ ಕುಟುಂಬದ ಸುರಕ್ಷತೆಗಾಗಿ ಮಾಸ್ಕ ಧರಿಸಲು ಮನವಿ ಮಾಡಿ ಜೊತೆಗೆ ಮಹಿಳೆಯರು ವಿಶೇಷವಾಗಿ ತಮ್ಮ ಹಾಗೂ ಚಿಕ್ಕ ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿವಹಿಸಲು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ವ್ಯಾಪಾರಿಗಳಲ್ಲಿಯೂ ಅರಿವು ಮೂಡಿಸಿ, ಸರ್ಕಾರದ ಮಾರ್ಗಸೂಚಿ ತಪ್ಪದೇ ಪಾಲಿಸಲು ತಿಳಿಹೇಳಿದರು.

ಈ ಸಂದರ್ಭದಲ್ಲಿ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ್, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ,ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.