ಮಾಸ್ಕ್, 5 ವರ್ಷದೊಳಗಿನ ಮಕ್ಕಳಿಗೆ ಅಗತ್ಯವಿಲ್ಲ

ನವದೆಹಲಿ, ಜೂ.೧೦- ಐದು ವರ್ಷ ಮತ್ತು ಒಳಗಿನ ಮಕ್ಕಳಿಗೆ ಮಾಸ್ಕ್ ಧರಿಸುವ ಕುರಿತು ಶಿಫಾರಸು ಮಾಡಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವ್ಯಾಪ್ತಿಯಡಿ ಬರುವ ಸಾಮಾನ್ಯ ಆರೋಗ್ಯ ಸೇವೆ ನಿರ್ದೇಶನಾಲಯ- ಡಿಜಿಎಚ್ ಎಸ್ ಮಾರ್ಗಸೂಚಿಯಲ್ಲಿ ಈ ವಿಷಯ ತಿಳಿಸಿಲ್ಲ ಎಂದು ಹೇಳಿದೆ.
೬ ರಿಂದ ೧೧ ವರ್ಷದ ಮಕ್ಕಳು ಪೋಷಕರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕೂಡ ಹೇಳಿದೆ.
ಅಗತ್ಯ ಸಂದರ್ಭದಲ್ಲಿ ಮಾತ್ರ ಮಕ್ಕಳಿಗೆ ಸಿಟಿ ಸ್ಕ್ಯಾನ್ ಮಾಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ ಎಂದು ದೆಹಲಿಯ ಗಂಗಾರಾಮ್ ಮಕ್ಕಳ ಆಸ್ಪತ್ರೆಯ ಮಕ್ಕಳ ರೋಗ ತಜ್ಞ ಡಾ.ದೀರೇನ್ ಗುಪ್ತ ತಿಳಿಸಿದ್ದಾರೆ.