ಮಾಸ್ಕ್, ಹೆಲ್ಮೆಟ್ ಧರಿಸದವರ ಮೇಲೆ ಕ್ರಮ

ಹನೂರ:ಏ:29: ಕೋವಿಡ್-19 ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ಪಟ್ಟಣದ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸದೇ ಇರುವ ವಾಹನ ಸವಾರರನ್ನು ತಡೆದು ಕ್ರಮ ಕೈಗೊಳ್ಳಲಾಯಿತು.
ಬೆಳಿಗ್ಗೆ 10 ಗಂಟೆ ಕಳೆಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಹನೂರು ಪೊಲೀಸ್ ತಂಡ ಬ್ಯಾರಿಕೇಡ್ ನಿರ್ಮಿಸಿ ಪ್ರತಿ ವಾಹನವನ್ನು ತೀವ್ರ ತಪಾಸಣೆ ನಡೆಸಿದ್ದಲ್ಲದೇ ಹೆಲ್ಮೆಟ್ ಧರಿಸದೇ ಇರುವವರಿಗೆ ದಂಡ ಹಾಗೂ ದಂಡದ ಬದಲು ಹೆಲ್ಮೆಟ್‍ನ್ನು ನೀಡಿ ರಸ್ತೆ ಸುರಕ್ಷ ಕ್ರಮಗಳನ್ನು ಪಾಲಿಸಿ ಎಂದು ಅರಿವು ಮೂಡಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಪೇದೆ ಗೋಪಾಲ್, ಪೇದೆಗಳಾದ ಬಿಳಿಗೌಡ, ರಾಘವೇಂದ್ರ, ಇನ್ನಿತರೆ ಸಿಬ್ಬಂದಿಗಳು ಇದ್ದರು.
ಎರಡನೇ ದಿನ ಉತ್ತಮ ಪ್ರತಿಕ್ರಿಯೆ: ಸರ್ಕಾರ 14 ದಿನಗಳ ಕಾಲ ಲಾಕ್‍ಡೌನ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ಪಟ್ಟಣದ ವರ್ತಕರು ಬೆಳಿಗಿನ ಜಾವದಿಂದ 10 ಗಂಟೆವರೆಗೆ ವ್ಯಾಪಾರ ವಹಿವಾಟನ್ನು ನಡೆಸಿದರು.
ಬೆಳಿಗ್ಗೆ 10 ಗಂಟೆ ನಂತರ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸದ ಹಿನ್ನಲೆಯಲ್ಲಿ ಮುಂಜಾನೆಯಿಂದಲೇ ಸಾರ್ವಜನಿಕರು ವಸ್ತುಗಳನ್ನು ಖರಿದಿಸಲು ಮುಗಿಬಿದ್ದಿದ್ದು ಕಂಡು ಬಂದಿತು.
ಹುಂಡಿ ಏಣಿಕೆ ಮುಂದಕ್ಕೆ: ತಾಲ್ಲೂಕಿನ ಸುಪ್ರಸಿದ್ಧ ದೇವಾಲಯ ಮಲೆಮಹದೇಶ್ವರ ಬೆಟ್ಟ ಮಾದಪ್ಪನ ದೇಗುಲದ ಹುಂಡಿ ಎಣಿಕೆ ಕಾರ್ಯವನ್ನು ಮುಂದೂಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ಸರ್ಕಾರ 14 ದಿನಗಳ ಕಾಲ ಲಾಕ್‍ಡೌನ್ ಘೋ ಷಣೆ ಮಾಡಿರುವ ಸಂಬಂಧ ದಿನಾಂಕ ಮೇ.30 ರಂದು ನಡೆಯಬೇಕಿದ್ದ ಹುಂಡಿ ಎಣಿಕೆ ಕಾರ್ಯ ವನ್ನು ಕೋವಿಡ್-19 ಮಾರ್ಗಸೂಚಿಯಂತೆ ಮುಂದೂ ಡಲಾಗಿರುವುದಾಗಿ ತಿಳಿಸಿದ್ದಾರೆ.