ಮಾಸ್ಕ್- ಸ್ಯಾನಿಟೈಸರ್ ವಿತರಣೆ

ಸಿರವಾರ.ಮೇ೨೮- ಕೋವಿಡ್ ೧೯ ವೈರಸ್ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಎಲ್ಲಾರೂ ಆರೋಗ್ಯದ ಕಡೆ ಗಮನ ಹರಿಸಿ, ಜೀವ ಇದ್ದರೆ ಮುಂದೆ ಜೀವನ ಮಾಡಬಹುದು, ನೀವು ಮಾಡುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಹಾಗೂ ವಿಎಸ್ ಎಸ್ ಎನ್ ಸದಸ್ಯ ರಮೇಶ ದರ್ಶನಕರ್ ಹೇಳಿದರು.
ತಮ್ಮ ಹುಟ್ಟುಹಬ್ಬದ ಅಂಗವಾಗಿ ಕೊರೊನಾ ವಾರಿಯರ್ಸ್‌ರಾದ ಪಟ್ಟಣ ಪಂಚಾಯತಿ ಪೌರ ಕಾರ್ಮಿಕರಿಗೆ, ಪೊಲೀಸ್, ಶಿಕ್ಷಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿ ಮಾತನಾಡಿದ ಅವರು ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಏಷ್ಟು ಎಚ್ವರ ವಹಿಸಿದರೂ ಸಾಲದೂ. ಕೊವೀಡ್ ವೈರಸ್ ತಡೆಯುವಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿಮ್ಮ ಸೇವೆ ಏಷ್ಟು ಕೊಂಡಾಡಿದರೂ ಸಾಲದೂ. ಜನರಲ್ಲಿ ಜಾಗೃತಿ ಬರುವವರೆಗೂ ಸೊಂಕು ಕಡಿಮೆಯಾಗುವುದು ಬಹಳ ವಿರಳ ಎಲ್ಲಾರೂ ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಬೇಕು. ಜೀವ ಇದ್ದರೆ ಮುಂದೆ ಏನಾದರೂ ಸಾಧನೆ ಮಾಡಬಹುದು ಎಂದರು. ಈ ಸಂದರ್ಭದಲ್ಲಿ ರಂಜೀತ್ ಊಬಾಳೆ ಸೇರಿದಂತೆ ಇನ್ನಿತರರು ಇದ್ದರು.