ಮಾಸ್ಕ್ ಮಾಯಾ, ದೈಹಿಕ ಅಂತರಕ್ಕೆ ತಿಲಾಂಜಲಿ

ಮೈಸೂರು. ಡಿ.22: ಮೊದಲನೆಯ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಮತದಾನದವು ಮೈಸೂರು ಗ್ರಾಮಾಂತರ ಪ್ರದೇಶಗಳಲ್ಲಿ ಅಬ್ಬರದಿಂದ ನಡೆಯುತ್ತಿದ್ದು, ಈ ನಡುವೆ ಮತದಾನ ಮಾಡಲು ಬಂದಿದ್ದ ಮತದಾರರಲ್ಲಿ ಮಾಸ್ಕ್ ಮಾಯವಾಗಿ, ದೈಹಿಕ ಅಂತರಕ್ಕೆ ತಿಲಾಂಜಲಿ ಹೇಳಲಾಗಿತ್ತು.
5,762 ಗ್ರಾಮ ಪಂಚಾಯಿತಿಗಳ 35,884 ಕ್ಷೇತ್ರಗಳಿಂದ 92,121 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.ಇಂದು ಮೊದಲ ಹಂತದಲ್ಲಿ 113 ತಾಲೂಕುಗಳಲ್ಲಿ 2930 ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ನಡೆಯುತ್ತಿದೆ.
ಮತದಾನ ಪ್ರಕ್ರಿಯೆ ಆರಂಭ.
ಗೋವಿಂದನಹಳ್ಳಿ ಗ್ರಾ.ಪಂ.ಚಿಕ್ಕಹುಣಸೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮತಗಟ್ಟೆಗೆ ತೆರಳಿದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.ಮತದಾರರಿಗೆ ಮತಗಟ್ಟೆ ಹೊರಗೆ ಥರ್ಮಲ್ ಸ್ಕ್ರೀನಿಂಗ್,ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿತ್ತು.ವಿಪರ್ಯಾಸವೇನೆಂದರೇ ಉಮ್ಮತ್ತೂರು ಮತಗಟ್ಟೆಗೆ ತೆರಳುವಾಗ ಮಾತ್ರ ಮಾಸ್ಕ್ ಕಂಡಿತೇ ಹೊರೆತು ಮತಗಟ್ಟೆ ಹೊರಗೆ ಮಾಸ್ಕ್ ಮಾಯಾ ಸಾಮಾಜಿಕ ಅಂತರ ಕಣ್ಮರೆಯಾಗಿತ್ತು.ಜಾಗತಿಕ ಪಿಡುಗು ಕೋವಿಡ್-19 ಮಹಾಮಾರಿ ನಡುವೆಯು ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಯುವ ಆಡಳಿತದ ಮೊದಲ ಪ್ರಯೋಗ ಶಾಲೆಯೆಂದರೆ ಎಂದು ಕರೆಯಲಾಗುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೋವಿಡ್ ನಿಯಾಮವಳಿ ಮೀರಿದ್ದು ಹೆಚ್ಚಾಗಿ ಕಂಡುಬಂದಿತು.