ಮಾಸ್ಕ್ ಮರೆಯದಿರಿ ಡಾ.ಕೃಷ್ಣ ಸಲಹೆ


ಹೈದರಾಬಾದ್, ಏ.೨೧- ಕೋರೋನಾ ಸೋಂಕಿಗೆ ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸುವುದನ್ನು ಯಾವುದೇ ಕಾರಣಕ್ಕೂ ಜನರು ಮರೆಯಬಾರದು. ಲಸಿಕೆ ಪಡೆದ ನಂತರೂ ಸೋಂಕು ಕಾಣಿಸಿಕೊಳ್ಳಬಹುದು ಎಂದು ಹೈದರಾಬಾದ್ ಮೂಲದ ಭಾರತ್ ಭಯೋಟೆಕ್ ಸಂಸ್ಥೆಯ ಮುಖ್ಯಸ್ಥ ಡಾ ಕೃಷ್ಣ ತಿಳಿಸಿದ್ದಾರೆ.
ಕೊರೋನಾ ಲಸಿಕೆ ಶ್ವಾಸಕೋಶವನ್ನು ರಕ್ಷಿಸುವುದಿಲ್ಲ ಹೀಗಾಗಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಲಸಿಕೆ ಪಡೆದಿದ್ದೇವೆ ಎನ್ನುವ ಉದಾಸೀನ ತೋರಬೇಡಿ ಎಂದು ಅವರು ಹೇಳಿದ್ದಾರೆ.
ಕೊರೋನೋ ಸೋಂಕಿಗೆ ಲಸಿಕೆ ಪಡೆದವರಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೋನಾ ವಿರುದ್ದದ ಹೋರಾಟದಲ್ಲಿ ೨ ಡೋಸ್ ಲಸಿಕೆ ಪಡೆದ ನಂತರವೂ ಜನರು ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ
ಶ್ವಾಸಕೋಶದ ಮೇಲ್ಭಾಗ ಮತ್ತು ಕೆಳಬಾಗವನ್ನು ಕೊರೋನಾ ಲಸಿಕೆ ರಕ್ಷಣೆ ಮಾಡುವುದಿಲ್ಲ ಹೀಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಕೊರೋನಾ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಲಸಿಕೆ ಪಡೆದಿದ್ದೇವೆ ಎನ್ನುವ ಕಾರಣಕ್ಕೆ ಉದಾಸೀನ ಮಾಡುವುದು ಸರಿಯಲ್ಲ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ದಿನದಿಂದ ದಿನಕ್ಕೆ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ಕಡೆಗಳಲ್ಲಿ ಆಮ್ಲಜನಕ ಮತ್ತು ಲಸಿಕೆ ಕೊರತೆ ಎದುರಾಗಿದೆ. ಎಲ್ಲರೂ ಸೋಂಕು ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಜೊತೆಗೂಡಿ ದೇಶೀಯ ಕೊರೋನಾ ಲಸಿಕೆ ಕೋವಾಕ್ಸಿನ್ ಅಭಿವೃದ್ಧಿ ಪಡಿಸಿದೆ.