ಮಾಸ್ಕ್ ಧರಿಸುವುದರಿಂದ ಕೋವಿಡ್ 4ನೇ ಅಲೆ ಹತೋಟಿಯಲ್ಲಿಡಬಹುದು

ಚಿತ್ರದುರ್ಗ.ಜ.೧೧:ಕೋವಿಡ್ ಇನ್ನೂ ಹೋಗಿಲ್ಲ. ಹೋರ ದೇಶಗಳಲ್ಲಿ ಹೆಚ್ಚು ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು, ನಾವಿನ್ನೂ ಕೋವಿಡ್ ಜೊತೆಯಲ್ಲಿಯೇ ಜೀವಿಸುತ್ತಿದ್ದೇವೆ ಹಾಗಾಗಿ 4ನೇ ಅಲೆ ನಿಯಂತ್ರಿಸಲು ಕೋವಿಡ್ ಮುಂಜಾಗ್ರತಾ ಲಸಿಕೆ ವರಸೆ ತಪ್ಪದೇ ಪಡೆಯಿರಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಬೆಳಘಟ್ಟ ಗ್ರಾಮದಲ್ಲಿ  ದುಗರ್ಗಾಂಭಿಕಾ ದೇವಿ ಜಾತ್ರಾ ಉತ್ಸವದ ಪ್ರಯುಕ್ತ ಗ್ರಾಮದ ಮಾದರಿ ಅಂಗನವಾಡಿ ಕೇಂದ್ರದಲ್ಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ಒದಗಿಸಲು ತಾತ್ಕಾಲಿಕ ವಿμÉೀಶ ಜಾತ್ರಾ ಚಿಕಿತ್ಸಾ ಕೇಂದ್ರ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜಾತ್ರೆಯಲ್ಲಿ ಮೈ ಮರೆಯದೇ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ರೋಗ ಲಕ್ಷಣವಿದ್ದರೆ ಕೂಡಲೇ ತಪಾಸಣೆ ಮಾಡಿ.  ಮನೆ ಪ್ರತ್ಯೇಕತೆಯಲ್ಲಿ 7 ದಿನಗಳ ತನಕ ಆರೈಕೆ ಮಾಡಿಕೊಳ್ಳಿ ಎಂದರು.
 ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ತಾತ್ಕಾಲಿಕ ತುರ್ತು ಚಿಕಿತ್ಸಾ ಘಟಕವನ್ನು ಇಂದಿನಿಂದ 5 ದಿನಗಳವರೆಗೆ ನಡೆಸಲಾಗುತ್ತದೆ. ಸಣ್ಣಪುಟ್ಟ ಕಾಯಿಲೆಗೆ ಚಿಕಿತ್ಸೆ ನೀಡುವುದು, ಕೋವ್ಯಾಕ್ಸಿನ್ ಮುಂಜಾಗ್ರತಾ ಲಸಿಕೆ ನೀಡಲು ಪ್ರಥಮ ಆದ್ಯತೆ ನೀಡಲಾಗಿದೆ. ಗ್ರಾಮದ ಹಲವು ಕಡೆ ಗುಂಪು ಸಭೆ ನಡೆಸಿ ಮಾಸ್ಕ್ ಧಾರಣೆ ಲಸಿಕಾ ಮಹತ್ವದ ಬಗ್ಗೆ ಮಾಹಿತಿ ಶಿಕ್ಷಣ ನೀಡಿದೆ ಎಂದರು.ಗ್ರಾಮದಲ್ಲಿ 9 ಕುಡಿಯುವ ನೀರಿನ ಮಿನಿ ಟ್ಯಾಂಕ್‍ಗಳನ್ನು ಗುರುತಿಸಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕ್ಲೋರಿನೇಷನ್ ಮಾಡಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ತೆರೆದು ಮಾರಾಟ ಮಾಡುವ ತಿಂಡಿ ಅಂಗಡಿ ಮಾರಾಟಗಾರರಿಗೆ ಮುಖ ಮುಖಿ ಸಮಾಲೋಚನೆ ನಡೆಸಿ ಮಾರಾಟ ಮಾಡುವ ತಿಂಡಿಗಳನ್ನು ಕೀಟ, ನೊಣ ಧೂಳಿನಿಂದ ಸುರಕ್ಷಿತವಾಗಿಟ್ಟು, ಮಾರಾಟ ಮಾಡಲು ತಿಳುವಳಿಕೆ ನೀಡಲಾಗಿದೆ. ಸಾರ್ವಜನಿಕ ದಾಸೋಹದ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರು ಸಾಂಕ್ರಾಮಿಕ ರೋಗಗಳು ಹರಡದಂತೆ ಈ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ ಸಹಕರಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಣಾಧಿಕಾರಿ ಹೆಚ್.ಆಂಜನೇಯ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರ್ ರೆಡ್ಡಿ, ರಂಗಾರೆಡ್ಡಿ, ಮಹೇಶ್, ಪ್ರವೀಣ್, ಪ್ರಶಾಂತ್, ಡಾ.ಮಂಜುಳಾ, ಸಮೂದಾಯ ಆರೋಗ್ಯಾಧಿಕಾರಿ ನವ್ಯಶ್ರೀ, ಆರೋಗ್ಯ ಸುರಕ್ಷತಾಧಿಕಾರಿ ನಿರ್ಮಲ ಇತರರು ಉಪಸ್ಥಿತರಿದ್ದರು 89 ಫಲಾನುಭವಿಗಳಿಗೆ ಕೋವ್ಯಾಕ್ಸಿನ್ ಮುಂಜಾಗ್ರತಾ ವರಸೆ ಲಸಿಕೆ ನೀಡಲಾಯಿತು.