ಮಾಸ್ಕ್ ಧರಿಸಿ ಕೊರೋನಾ ತಡೆಗಟ್ಟಿ – ನ್ಯಾ.ದೊಡ್ಡಮನಿ

ಸಿಂಧನೂರು.ಏ.೨೮-ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸಿ ಕೊರೋನಾವನ್ನು ತಡೆಗಟ್ಟಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೇಯಾಂಸ ದೊಡ್ಡಮನಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ನಗರಸಭೆ, ಪೊಲೀಸ್ ಇಲಾಖೆ ನ್ಯಾಯಲಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೊರೋನಾ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಎಲ್ಲರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ನ್ಯಾಯಲಯದ ಆವರಣದಿಂದ ನ್ಯಾಯವಾದಿಗಳು ನಗರಸಭೆ ಸಿಬ್ಬಂದಿಗಳು,ಪೊಲೀಸ್ ಅಧಿಕಾರಿಗಳು ಜೊತೆಗೂಡಿ ಗಾಂಧಿ ವೃತ್ತದಲ್ಲಿರುವ ಅಕ್ಕಪಕ್ಕದ ಅಂಗಡಿಗಳ ವ್ಯಾಪಾರಿಗಳು ಹಾಗೂ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ನ್ಯಾಯಧೀಶರು ಮಾಸ್ಕ್‌ಗಳನ್ನು ವಿತರಿಸಿ ಕೊರೋನಾ ಜಾಗೃತಿ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಸರ್ಕಾರದ ಆದೇಶದಂತೆ ಇಂದು ಮಾಸ್ಕ್ ವಿತರಣೆ ಕೊರೋನಾ ಜಾಗೃತಿ ಬಗ್ಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರೂ ಸಹ ಕಾರ್ಯಕ್ರಮಕ್ಕೆ ಬಾರದ ,ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ನ್ಯಾಯಾಧೀಶರಾದ ಶ್ರೇಯಾಂಸ ದೊಡ್ಡಮನಿ ತಮ್ಮ ಸಿಬ್ಬಂದಿಗಳಿಗೆ ಆದೇಶ ಮಾಡಿದರು.
ಎಪಿಪಿ ನಾಗರಾಜ, ನಗರಸಭೆ ಕಮಿಷನರ್ ಆರ್.ವಿರುಪಾಕ್ಷಿ ಮೂರ್ತಿ, ಸಿಪಿಐ ಶ್ರೀಕಾಂತ ಅಲ್ಲಾಪುರ, ನ್ಯಾಯವಾದಿಗಳಾದ ಜಿ.ವಿ ಜೋಷಿ, ಆರ್.ಕೆ.ನಾಗರಾಜ ,ಅಯ್ಯಪ್ಪ, ಹನುಮಂತ, ನಗರಸಭೆಯ ಹಿರಿಯ ಆರೋಗ್ಯ ಸಹಾಯಕರಾದ ಕಿಶನ್‌ರಾವ್, ಮೇಸ್ತ್ರಿ ಅಮರೇಶ ಸೇರಿದಂತೆ ಪೋಲಿಸ್, ನಗರಸಭೆ ನ್ಯಾಯಲಯದ ಸಿಬ್ಬಂದಿಗಳು ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಹಾಜರಿದ್ದರು.