ಮಾಸ್ಕ್ ಧರಿಸಿ ಎಂದಿದ್ದಕ್ಕೆ ಚಾಲಕನ ಮೇಲೆ ಯುವತಿ ಹಲ್ಲೆ

ಲಾಸ್ ವೇಗಾಸ್, ಮಾ. ೧೪: ಮಾಸ್ಕ್ ಧರಿಸಲು ಕೇಳಿಕೊಂಡ ಊಬರ್ ಚಾಲಕನ ಮೇಲೆ ಪೆಪ್ಪರ್ ಸ್ಪ್ರೆ ಸಿಂಪಡಿಸಿ ಹಲ್ಲೆ ಮಾಡಿದ ೨೪ ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಅಮೇರಿಕಾದ ಲಾಸ್ ವೇಗಾಸ್ ನಲ್ಲಿ ನಡೆದಿದೆ.
೨೪ ವರ್ಷದ ಯುವತಿಯ ಹೆಸರು ಮಲೇಷ್ಯಾ ಕಿಂಗ್ ಆಗಿದ್ದು ಆಕೆ ತನ್ನ ಸ್ನೇಹಿತೆಯರೊಡನೆ ಊಬರ್ ಟ್ಯಾಕ್ಸಿ ಹತ್ತಿದ್ದಾರೆ. ಆದರೆ ಮಾಸ್ಕ್ ಧರಿಸದಿದ್ದ ಆಕೆಗೆ ಮಾಸ್ಕ್ ಧರಿಸಿ ಎಂದು ಊಬರ್ ಚಾಲಕ ಕೇಳಿಕೊಂಡಿದ್ದಾನೆ. ಆದರೆ ಆ ಯುವತಿಯರು ಮಾಸ್ಕ್ ಧರಿಸಲು ನಿರಾಕರಿಸಿದ್ದು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.ಯುವತಿಯ ವಿರುದ್ಧ ಹಲ್ಲೆ ಪಿತೂರಿ ಮತ್ತು ಆರೋಗ್ಯ ಮತ್ತು ಸುರಕ್ಷತಾ ಸಂಹಿತೆಯ ಉಲ್ಲಂಘನೆಯ ಆರೋಪ ಹೊರಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.ಯುವತಿಯರು ಮೂಲತಃ ಮಲೇಷ್ಯಾದವರಾಗಿದ್ದಾರೆ.
ಡೈಲಿ ಶೋ ಆನ್ ಕಾಮಿಡಿ ಸೆಂಟ್ರಲ್” ನ ಭಾಗವಾಗಿರುವ ಮಲೇಷ್ಯಾ ಮೂಲದ ಹಾಸ್ಯನಟ ಮತ್ತು ನಟ ರೋನಿ ಚಿಯೆಂಗ್ ತಮ್ಮ ಟ್ವಿಟ್ಟರ್ ನಲ್ಲಿ “ಮಲೇಷ್ಯಾ ಕಿಂಗ್ ಳ ನಡವಳಿಕೆ ಮಲೇಷ್ಯಾದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ” ಎಂದು ಹೇಳಿದ್ದಾರೆ.