ಮಾಸ್ಕ್ ಧರಿಸದ ೪೦ಕ್ಕೂ ಅಧಿಕ ಮಂದಿಗೆ ಫೈನ್ | ಅಂಗಡಿಗಳಿಗೆ ತೆರಳಿ ಖಡಕ್ ವಾರ್ನಿಂಗ್

ಕಡಬ, ಎ.೨೧- ಕೊರೋನಾ ಎರಡನೇ ಅಲೆ ಆವರಿಸಿದ್ದು ಜಿಲ್ಲಾಡಳಿತದ ಸೂಚನೆಯಂತೆ ಕಡಬ ಪ.ಪಂ ಸಿಬ್ಬಂದಿಗಳು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ  ಫೀಲ್ಡ್‌ಗೆ ಇಳಿದಿದ್ದು ಮಾಸ್ಕ್ ಹಾಕದವರಿಗೆ ಪೈನ್ ಹಾಕಿ ಎಚ್ಚರಿಕೆ ನೀಡಿದ್ದಾರೆ.

ಕಡಬ ಪಟ್ಟಣದುದ್ದಕ್ಕೂ ಕೊರೋನಾ ಕಾರ್ಯಪಡೆ ಭಾನುವಾರವೇ  ಸಾರ್ವಜನಿಕ ಸ್ಥಳಗಳಿಗೆ ತೆರಳಿ ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಯಪಡಿಸಿದ್ದರು.

ಮಂಗಳವಾರದಂದು ಮಾಸ್ಕ್ ಧರಿಸದ ನಲ್ವತಕ್ಕೂ ಅಧಿಕ ಮಂದಿಗೆ ೧೦೦ ರೂ ನಂತೆ ಎಚ್ಚರಿಕೆಯ ರೂಪದಲ್ಲಿ ದಂಡ ವಿಧಿಸಿದ್ದಾರೆ.ನಾಳೆಯಿಂದ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಮಾಹಿತಿ ಲಾಭಿಸಿದೆ.ಪ.ಪಂ ಬಿಲ್ ಕಲೆಕ್ಟರ್ ಹರೀಶ್, ಸಿಬ್ಬಂದಿ ರಿಯಾಝ್, ಕಡಬ ಠಾಣಾ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.