ಮಾಸ್ಕ್ ಧರಿಸದಿದ್ದವರಿಗೆ ನಗರದ ಹಲವಡೆ ದಂಡ

ಬಳ್ಳಾರಿ, ಏ.18: ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕರೋನಾ ಸೋಂಕು ನಿಯಂತ್ರಣಕ್ಕಾಗಿ ಜನತೆ ಮಾಸ್ಕ್‍ನ್ನು ಖಡ್ಡಾಯವಾಗಿ ಬಳಸುವಂತೆ ಮಾಡಲು ಜಿಲ್ಲಾಡಳಿತ ಇಂದಿನಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.
ಈ ಹಿನ್ನಲೆಯಲ್ಲಿ ಇಂದು ಜಿಲ್ಲೆಯ ಪಟ್ಟಣ, ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ಅಧೀಕಾರಿಗಳು ಪೊಲೀಸರ ಸಹಕಾರದಿಂದ ಜಾಗೃತಿ ಮೂಡಿಸುವುದು, ಜೊತೆಗೆ ದಂಡ ವಿಧಿಸುವ ಪ್ರಕ್ರಿಯೆ ಆರಂಭಸಿದ್ದಾರೆ.
ಇಂದು ಬೆಳಿಗ್ಗೆ ನಗರದ ಬ್ರೂಸ್‍ಪೇಟೆ ಸರ್ಕಲ್ ಸೇರಿಂದತೆ ಹಲವು ಸರ್ಕಲ್ ಹಾಗು ಪ್ರಮುಖ ರಸ್ತೆಗಳಲ್ಲಿ ಪಾಲಿಕೆಯ ಸಿಬ್ಬಂದಿ ಈ ಕಾರ್ಯ ಮಾಡಿದರು.
ಮಾಸ್ಕ್ ಧರಿಸದೇ ಬರುತ್ತಿದ್ದ ಜನರಿಗೆ ತಿಳುವಳಿಗೆ ಜೊತೆ ದಂಡ ಹಾಕಲು ಮುಂದಾದಾಗ ಮಾತಿನ ಚಕಮಕಿ ಸಹ ನಡೆಉಇತು. ಇನ್ನು ಕೆಲವರು ಹೀಗೆ ಮಾಡುತ್ತಿದ್ದನ್ನು ಕಂಡು ಅಲ್ಲಿಗೆ ಬರುತ್ತಲೇ ಕುತ್ತಿಗೆ ಬಳಿ ನೆಪ ಮಾಥ್ರಕ್ಕೆ ಇದ್ದ ಮಾಸ್ಕ್ ನ್ನು ಮುಖಕ್ಕೆ ಎಳೆದುಕೊಳ್ಳುತ್ತಿದ್ದರು.
ಬಹುತೇಖ ಆಟೋ ಚಾಲಕರು, ಅದರಲ್ಲಿ ಪ್ರಯಾನಿಸುತ್ತದ ಜನತೆ ಸಹ ಮಾಸ್ಕಧರಿಸದೇ ಇದ್ದುದು ಕಂಡು ಬಂತು.