ಮಾಸ್ಕ್ ಧರಿಸದವರಿಗೆ ಲಾಟಿ ರುಚಿ


ಬಾದಾಮಿ,ಏ,26:ವೀಕೆಂಡ್ ವೀಕೆಂಡ್ ಎರಡು ದಿನಗಳ ಕಾಲ ಯಶಸ್ವಿಗೊಂಡಿದೆಯಾದರೂ ಜನತೆ ತಮ್ಮ ಅಗತ್ಯ ಸಲಕರಣೆಗಳನ್ನು ಖರೀದಿಸಲು ಅಲ್ಲಲ್ಲಿ ಓಡಾಡುತ್ತಿರುವುದು ಕಂಡು ಬಂದಿತು.
ಈ ನಡುವೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಯಥಾವತ್ತಾಗಿ ಕಾರ್ಯಾರಂಭ ಮಾಡಿದ್ದು, ಮಾಸ್ಕ್ ಹಾಕದೆ ಮತ್ತು ಅನಗತ್ಯವಾಗಿ ತಿರುಗಾಡುವ ಯುವಕರನ್ನು ತಡೆದು ದಂಡ ವಿಧಿಸುವ ಜತೆಗೆ ಅಲ್ಪ ಲಾಟಿ ರುಚಿಯನ್ನೂ ತೋರಿಸಿದರು.
ಬೆಳಿಗ್ಗೆ 6 ರಿಂದ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶವನ್ನು ಜನತೆ ಸದುಪಯೋಗ ಪಡೆದು ಮನೆಯಲ್ಲಿಯೇ ಉಳಿದಿದ್ದರೂ ಕೆಲವು ಆರೋಗ್ಯ ಮತ್ತು ಔಷಧಿ ಕಾರಣಗಳಿಂದ ಹೊರಗಡೆಗೆ ಅಡ್ಡಾಡಿದ್ದು ಕಂಡು ಬಂದಿತು.
ಜನರ ಒಳಿತಿಗಾಗಿ ಸರಕಾರ ಹರಸಾಹಸ ಮಾಡುತ್ತಿದ್ದರೂ ಜನತೆ ತಿಳಿದುಕೊಳ್ಳುತ್ತಿಲ್ಲ, ನೀಡಿರುವ ಅವಕಾಶದಲ್ಲಿ ಅಗತ್ಯ ವಸ್ತುಗಳೊಂದಿಗೆ ಮನೆಯಲ್ಲಿಯೇ ಇದ್ದರೆ ಮಾತ್ರ ಕೋವಿಡ್ ಎರಡನೆ ಅಲೆಯನ್ನು ತಡೆಗಟ್ಟಬಹುದಾಗಿದೆ. ನಂತರ ಏ 25 ರಂದು ಸ್ಥಳೀಯವಾಗಿ ಪರವಾನಿಗೆ ಸಹಿತ ನಡೆಯುತ್ತಿರುವ ಮದುವೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸರಕಾರದ ನಿಯಮದಂತೆ 50ಕ್ಕೂ ಹೆಚಿನ ಜನ ಇದ್ದರೆ ಕ್ರಮ ಕೈಗೊಳ್ಳುವುದಾಗಿ ಬೆಳಿಗೆನೆ ಮದುವೆ ಕುಟುಂಬಸ್ಥರಿಗೆ ಸೂಚಿಸಿಲಾಗಿತ್ತು. ಅದರಂತೆ ಸಹಕರಿಸಿದ್ದಾರೆ ಎಂದು ತಹಸೀಲ್ದಾರ್ ಸುಹಾಸ ಇಂಗಳೆ ಹೇಳಿದರು.