ಮಾಸ್ಕ್ ಧರಿಸದವರಿಗೆ ಬಸ್ಕಿ ಶಿಕ್ಷೆ


ಬ್ಯಾಡಗಿ:ವೀಕೆಂಡ್ ಕಫ್ರ್ಯೂ ಜಾರಿಯಿದ್ದಾಗಲೂ ವiಸ್À್ಕ ಇಲ್ಲದೇ ರಸ್ತೆಗಿಳಿದಿದ್ದ ಯುವಕರಿಬ್ಬರಿಗೆ ತಹಸೀಲ್ದಾರ ರವಿಕುಮಾರ ಕೊರವರ ಸುಮಾರು 20ಕ್ಕೂ ಬಸ್ಕಿ ಹೊಡೆಸುವ ಮೂಲಕ ವಿಭಿನ್ನ ರೀತಿಯಲ್ಲಿ ಎಚ್ಚರಿಸಿದ ಘಟನೆ ಶನಿವಾರ ನಡೆಯಿತು.
ತಾಲೂಕಾಡಳಿತದ ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ ಶಿಡೇನೂರ ರಸ್ತೆಯಲ್ಲಿ ಮಾಸ್À್ಕ ಇಲ್ಲದೇ ರಸ್ತೆಗಿಳಿದಿದ್ದ ಯುವರಿಬ್ಬರಿಗೆ ತಹಶೀಲ್ದಾರ ರವಿಕುಮಾರ ಕೊರವರ ಮಾಸ್À್ಕ ಹಾಕದಿರುವುದು ಸೇರಿದಂತೆ ಲಾಕಡೌನ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಸ್ಕಿ ಹೊಡೆಸಿ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರ ಹಿಂದಿನ ಉದ್ದೇಶವಿಷ್ಟೇ ಡೆಡ್ಲಿ ಕೊರೊನಾದಿಂದ ರಕ್ಷಣೆ ನಮ್ಮ ಕೈಯಲ್ಲಿದೆ, ಸರ್ಕಾರದ ನಿಯಮ ಪಾಲನೆಯಲ್ಲಿ ಉದಾಸೀನತೆ ಬೇಡ, ರೋಗಸ್ಥ ಸಂತ್ರಸ್ಥರ ಜೊತೆಯದ್ದವರಿಗೂ ಅಪಾಯ ತಂದೊಡ್ಡವುದರಿಂದ ಮಾಸ್ಕ ಹಾಕದೇ ಕಫ್ರ್ಯೂ ಸಮಯದಲ್ಲಿ ಮನೆಯಿಂದ ಹೊರಬರದಂತೆ ಯುವಕರಿಗೆ ಬಸ್ಕಿ ಶಿಕ್ಷೆಯೊಂ ದಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಗುಂಡಪ್ಪ, ಶಶಿಧರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.