ಮಾಸ್ಕ್ ಧರಿಸದವರಿಗೆ ಪೋಲಿಸರಿಂದ ದಂಡ ಮಾಸ್ಕ್ ವಿತರಣೆ

ಸಿಂಧನೂರು.ಮೇ.೧-ಜನರ ಅನಗತ್ಯವಾಗಿ ಹೊರಗೆ ಓಡಾಡದಂತೆ ಸರಕಾರ ಆದೇಶ ಮಾಡಿ ಕೊರೋನ ನಿಯಂತ್ರಣಕ್ಕಾಗಿ ೧೪ ದಿನಗಳ ಲಾಕ್‌ಡೌನ್ ಜಾರಿ ಮಾಡಿದ್ದರೂ ಸಹ ಸರಕಾರದ ಆದೇಶವನ್ನು ಗಾಳಿಗೆ ತೂರಿ ಮಾಸ್ಕ್ ಧರಿಸದೆ, ಸಾಮಾಜೀಕ ಅಂತರ ಕಾಪಾಡದೇ ಜನ ವಿನಾಃಕಾರಣ ಗುಂಪು ಗುಂಪಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ.
ಲಾಕ್‌ಡೌನ್ ಜಾರಿಯಾದಾಗಿನಿಂದ ಇಲ್ಲಿಯತನಕ ಮಾಸ್ಕ್ ಧರಿಸಿ ಸಾಮಾಜೀಕ ಅಂತರ ಕಾಪಾಡಿ ಕರೋನದಿಂದ ನಿಮ್ಮ ಜೀವ ಉಳಿಸಿಕೊಳ್ಳಿ ಎಂದು ನಗರಸಭೆ ಸಿಬ್ಬಂದಿಗಳು ಆಟೋಗಳ ಮೂಲಕ ಕರಪತ್ರ ಹಂಚಿ ಮೈಕ್ ಮೂಲಕ ವ್ಯಾಪಕ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪೋಲಿಸರು ಸಹ ಅನಗತ್ಯವಾದ ಹೊರಗೆ ಬಂದು ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ಹಾಕಿ ಎಚ್ಚರಿಕೆ ನೀಡಿದರು ಸಹ ಜನರಿಗೆ ಮಾತ್ರ ಅಧಿಕಾರಿಗಳ ಮಾತುಗಳು ಕಿವಿಯಲ್ಲಿ ಹಾಕಿಕೊಳ್ಳುತ್ತಿಲ್ಲ.
ಅಗತ್ಯ ವಸ್ತುಗಳ ಖರಿದೀಗಾಗಿ, ಬೆಳಿಗ್ಗೆ ೧೦ ಗಂಟೆ ತನಕ ಖರಿದಿಗೆ ಸಮಯ ನೀಡಿದರು ಸಹ ಅಗತ್ಯ ವಸ್ತುಗಳ ಖರಿದಿಗಾಗಿ ಪ್ರತಿದಿನ ಜನ ಮಾಸ್ಕ್ ಧರಿಸದೆ, ಸಾಮಾಜೀಕ ಅಂತರ ಕಾಪಾಡದೇ, ಕಿರಾಣಿ ಅಂಗಡಿ, ತರಕಾರಿ ಮಾರುಕಟ್ಟೆ, ಹೋಟೆಲ್‌ಗಳ ಮುಂದೆ ಗುಂಪು ಗುಂಪಾಗಿ ನಿಂತು ಖರಿಧಿಸುತ್ತಿರುವುದು ಕಂಡುಬರುತ್ತಿದೆ.
ನಗರ ಠಾಣೆ ಪಿಎಸ್‌ಐ ವಿಜಯ ಕೃಷ್ಣ ತಮ್ಮ ಸಿಬ್ಬಂದಿಗಳ ಜೊತೆ ನಗರದ ಜನನೀಬಿಡ ಪ್ರದೇಶಗಳು ಹಾಗೂ ಸರ್ಕಲ್‌ಗಳಲ್ಲಿ ಸಂಚರಿಸಿ ಗುಂಪು ಗುಂಪಾಗಿ ನಿಂತ ಜನರನ್ನು ಚದುರಿಸಿ ಮಾಸ್ಕ್ ಧರಿಸದವರಿಗೆ ದಂಡ ಹಾಕಿ ಉಚಿತವಾಗಿ ಮಾಸಕ್‌ಗಳನ್ನು ನೀಡಿ ಕರೋನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮಾಸ್ಕ್ ಇಲ್ಲದೆ ಅನಗತ್ಯವಾಗಿ ಹೊರಗಡೆ ತಿರುಗಾಡಿದರೆ, ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಲಾಕ್‌ಡೌನ್ ಆದಾಗಿನಿಂದ ಇಲ್ಲಿಯತನಕ ಮಾಸ್ಕ್ ಧರಸದವರ ಮೇಲೆ ೨೦೦ ಪ್ರಕರಣಗಳನ್ನು ದಾಶಖಲಿಸಿದ್ದಾರೆ. ಹಲವಾರು ಬೈಕ್‌ಗಳನ್ನು ಸೀಜ್ ಮಾಡಿದ್ದಾರೆ. ಹಲವಾರು ಬೈಕ್‌ಗಳನ್ನು ಸೀಜ್ ಮಾಡಿ ಎಚ್ಚರಿಕರ ನೀಡಿದರೂ ಸಹ ಕರೋನ ನಮಗೆ ಸಂಬಂಧವಿಲ್ಲ ಎಂದು ಜನ ಮೊಂಡುತನದಿಂದ ವಿನಾಃಕಾರಣ ಹೊರಗಡೆ ತಿರುಗಾಡುತ್ತಿದ್ದು ಕಂಡುಬಂದಿದೆ.