ಮಾಸ್ಕ್ ಧರಿಸದವರಿಗೆ ದಂಡ

ಹರಪನಹಳ್ಳಿ.ಏ.೨೮; ಪಟ್ಟಣದಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಪುರಸಭೆಯ ಹಾಗೂ ಹೋಂ ಗಾರ್ಡ ಬೀದಿಗಿಳಿದು ದ್ವಿಚಕ್ರ ವಾಹನ, ಕಾರು, ಸಾರ್ವಜನಿಕರು ಸೇರಿದಂತೆ ಕೋವಿಡ್ ನಿಯಮ ಉಲ್ಲಂಘಿಸಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸಿ ಚುರುಕು ಮುಟ್ಟಿಸಿದರು.
ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಮಂಗಳವಾರ ಸಿಬ್ಬಂದಿಯೊAದಿಗೆ ಖಾಸಗಿ ಬಸ್, ದ್ವಿಚಕ್ರ ವಾಹನಗಳಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರಕಾಯ್ದುಕೊಳ್ಳದೆ ಸಂಚರಿಸುತ್ತಿದ್ದವರಿಗೆ ರಾಜ್ ಹಾಗೂ ಪಪಂ ಮುಖ್ಯಾಧಿ ಕಾರಿ ಲಕ್ಷ್ಮಣ್ ಕುಮಾರ್ ನೇತೃತ್ವದ ತಂಡ ವಾಹನಗಳನ್ನು ತಡೆದು ದಂಡ ವಿಧಿಸಿ ಸರ್ಕಾರದ ನಿಯಮ ಅನುಸರಿಸುವಂತೆ ಅರಿವು ಮೂಡಿಸಿದರು.
ಸೋಂಕು ನಿಯಂತ್ರಿಸಲು ಸಹಕರಿಸಿ: ಸಮುದಾಯ ಸಂಘಟನಾಧಿಕಾರಿ ಸಿ.ಲೋಕಾನಾಯ್ಕ್ ಮಾತನಾಡಿ, ಕೋವಿಡ್ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದ್ದು, ಇದನ್ನು ತಡೆಯಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದೆ. ತಾಲೂಕಿನಲ್ಲಿ ಪ್ರತಿದಿನ 25ಕ್ಕೂ ಹೆಚ್ಚು ಸೋಂಕಿತರ ಸಂಖ್ಯೆ ದಾಟುತ್ತಿದೆ. ಸೋಂಕು ನಿಯಂತ್ರಿಸಲು ಸಾರ್ವಜನಿಕರು ಕಡ್ಡಾಯ ವಾಗಿ ಮಾಸ್ಕ್ಧರಿಸಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳವುದರ ಜೊತೆಗೆ ಸ್ಯಾನಿಟೈಸರ್‌ನ್ನು ಬಳಸಬೇಕು ಎಂದರು.
ಈ ಸಂಧರ್ಭದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ, ಬಿಲ್ ಕಲೇಕ್ಟರ್ ಹೆಚ್.ಆನಂದ, ವಾಗೀಶ್, ಲಿಂಗರಾಜ್, ಹನುಮಂತ, ಕೆ.ಬಸವರಾಜ್, ಅಜ್ಜಯ್ಯ ಹಾಗೂ ಪುರಸಭೆ ಸಿಬ್ಬಂದಿ ವರ್ಗದವರು ಜೊತೆಗಿದ್ದರು.