ಮಾಸ್ಕ್ ಇಲ್ಲದೇ ಸಂಚಾರ ಬೇಡ; ಎಂ.ಪಿ ಆರ್ ಮನವಿ

ದಾವಣಗೆರೆ.ಏ.೧೯;  ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ  ಎಂ ಪಿ ರೇಣುಕಾಚಾರ್ಯ ಅವರು ಹೊನ್ನಾಳಿಯ ತಮ್ಮ.ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಅಂತರ ಕಾಪಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ವೇಳೆ ಸಂಜೆವಾಣಿ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು  ಪಕ್ಷದ ಕಾರ್ಯಕರ್ತರೊಂದಿಗೆ  ಅಂತರವನ್ನು ಕಾಪಾಡಿಕೊಂಡಿದ್ದೇನೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು  ಯಾವುದೇ ಕಾರಣಕ್ಕೂ ಮಾಸ್ಕ್ ಇಲ್ಲದೆ  ಹೊರಗಡೆ ಸಂಚಾರ ಮಾಡಬಾರದು ಮತ್ತು ಅಂತರವನ್ನು ಕಾಪಾಡಿಕೊಳ್ಳಬೇಕೆಂದು ತಾಲ್ಲೂಕಿನ ಎಲ್ಲಾ ಮತ ಬಾಂಧವರಲ್ಲಿ  ವಿನಂತಿಸಿಕೊಂಡಿದ್ದಾರೆ ಕೊರೋನಾ ಬಗ್ಗೆ ಭಯ ಬೇಡ ನಾನು ಸಹ ಸೋಂಕಿತನಾಗಿದ್ದಾನೆ ನಾನು ಭಯಪಡುವುದಿಲ್ಲ  ಗುಣಮುಖನಾಗಿ ಬರುತ್ತೇನೆ ತಾವೆಲ್ಲರೂ ಆರೋಗ್ಯದ ಕಡೆ ಗಮನಹರಿಸಬೇಕೆಂದು ಸಾರ್ವಜನಿಕರಲ್ಲಿ  ಮನವಿ ಮಾಡಿಕೊಂಡರು.