ಮಾಸ್ಕ್ ಇಲ್ಲದೆ ರಸ್ತೆಗಿಳಿದರೆ ಪೊಲೀಸ್ ರಿಂದ ಬೀಳುತ್ತೆ ದಂಡ

ಜಗಳೂರು.ಏ.೨೦; ಪಟ್ಟಣದಲ್ಲಿ ಇನ್ನು ಮುಂದೆ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಮತ್ತು ಅನವಶ್ಯಕವಾಗಿ ಮಾಸ್ಕ್ ಇಲ್ಲದೆ ರಸ್ತೆಗಿಳಿದರೆ ಪೊಲೀಸ್ ರಿಂದ ಬೀಳುತ್ತೆ ದಂಡ ಜಗಳೂರು ಪಟ್ಟಣದಲ್ಲಿ ಪ್ರಮುಖ ರಸ್ತೆಗಳ ಎರಡು ಬದಿಯಲ್ಲಿ ಇಂದು ಸಂಚಾರಿ ನಿಯಮ ಗಳನ್ನು ಉಲ್ಲಂಘಿಸಿದವರಿಗೆ ಮತ್ತು ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೀಡಿಂಗ್  ಹೋಗುವವರಿಗೆ ಮತ್ತು ಮುಖಕ್ಕೆ ಹಾಕದೆ ಓಡಾಡುವವರಿಗೆ ಜಗಳೂರು ಪೊಲೀಸರು ದಂಡ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ  ಪಟ್ಟಣದಲ್ಲಿ ದಿನದಿಂದ  ದಿನಕ್ಕೆ ಜನ
ದಟ್ಟಣೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ವಾಹನ ಸವಾರರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಸಂಚಾರಿ ನಿಯಮ ಉಲ್ಲಂಘಿಸುತ್ತಿದರು ಅದಕ್ಕೆ ಈಗ ಪೊಲೀಸ್ ಇಲಾಖೆ ಆರಕ್ಷಕ ವೃತ್ತ ನಿರೀಕ್ಷಕರಾದ ಮಂಜುನಾಥ್ ಪಂಡಿತ್ ಮತ್ತು ಆರಕ್ಷಕ ಉಪ ನಿರೀಕ್ಷಕರಾದ ಸಂತೋಷ್ ಬಾಗೋಜಿ ಮತ್ತು ಪೊಲೀಸ್ ಸಿಬ್ಬಂದಿ ಒಳಗೊಂಡಂತೆ ಇಂದು ಜಗಳೂರು ಪಟ್ಟಣದಲ್ಲಿ ಮೂರು ದಿನ ಎಡಭಾಗ ಮತ್ತು ಮೂರು ದಿನ ಬಲಭಾಗಕ್ಕೆ ನಿಲ್ಲಿಸುವಂತೆ ವಾಹನ ಸವಾರರಿಗೆ  ಕಾರ್ಯಾಚರಣೆ ಮಾಡಿ ಜಾಗೃತಿ ನೀಡಿದರು  ನಂತರ ಆರಕ್ಷಕ ಉಪ ನಿರೀಕ್ಷಕ  ಸಂತೋಷ್ ಬಾಗೋಜಿ ಮಾತನಾಡಿ ಇನ್ನು ಮುಂದೆ ಪಟ್ಟಣದ ತುಂಬೆಲ್ಲ ಅನಾವಶ್ಯಕವಾಗಿ ದ್ವಿಚಕ್ರ ವಾಹನದ ಮೂಲಕ ಓಡಾಡುವ ಸಾರ್ವಜನಿಕರು ಮಾಸ್ಕ್ ಇಲ್ಲದೆ ಓಡಾಡುವವರನ್ನು ಕಂಡು ಅವರಿಗೆ 100 ರೂಪಾಯಿ ದಂಡ ಹಾಕುತ್ತಿದ್ದೇವೆ  ಈಗಾಗಲೇ ಸುಮಾರು ಸಾರ್ವಜನಿಕರಿಗೆ ದಂಡ ಹಾಕಲಾಗಿದೆ ಎಂದು ಅವರು ತಿಳಿಸಿದರು.ಪೊಲೀಸ್ ಇಲಾಖೆಯ ಈ ಕಾರ್ಯಕ್ಕೆ ಜಗಳೂರು ಪಟ್ಟಣದ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಬಸವರಾಜ್. ಟ್ರಾಫಿಕ್ ಪೊಲೀಸ್ ರಮೇಶ್. ಕುಮಾರಸ್ವಾಮಿ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು