ಮಾಸ್ಕ್ ಇಲ್ಲದಿದ್ದರೆ‌ ಪ್ರವೇಶ‌ ಕೊಡಬೇಡಿ, ವಾಣಿಜ್ಯ ಅಂಗಡಿ‌ ಮಾಲೀಕರಿಗೆ ಪಾಲಿಕೆ ಖಡಕ್ ಸೂಚನೆ

ಕಲಬುರಗಿ:ಮಾ.15: ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇದರ‌ ನಿಯಂತ್ರಣಕ್ಕಾಗಿ ಪಾಲಿಕೆ ವ್ಯಾಪ್ತಿಯ ಶಾಪಿಂಗ್‌ ಮಾಲ್, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್, ವಾಣಿಜ್ಯ ಅಂಗಡಿ-ಮುಂಗಟ್ಟು ಸ್ಥಳದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ‌ ಪ್ರವೇಶ‌ ನಿಷೇಧಿಸಿ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ‌ ಅವರು ವಾಣಿಜ್ಯ ಅಂಗಡಿಗಳ ಮಾಲೀಕರಿಗೆ ಖಡಕ್ ಸೂಚನೆ‌ ನೀಡಿದ್ದಾರೆ.

ಒಂದು ವೇಳೆ‌ ಮಾಸ್ಕ್ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಪ್ರವೇಶ ನೀಡಿದಲ್ಲಿ ಅಂತಹ‌ ವಾಣಿಜ್ಯ ಅಂಗಡಿಗಳ‌ ಮಾಲೀಕರಿಗೆ ದಂಡ ಹಾಕಿ‌ ಕಾನೂನು‌ ಕ್ರಮ‌ ಕೈಗೊಳ್ಳಲಾಗುವುದು‌ ಎಂದು ಪಾಲಿಕೆ ಆಯುಕ್ತರು ಎಚ್ಚರಿಕೆ‌ ನೀಡಿದ್ದಾರೆ.

ಕೋವಿಡ್-19 ಎರಡನೇ‌ ಅಲೆ‌ ನಿಯಂತ್ರಣ ಮತ್ತು ನೈರ್ಮಲೀಕರಣಕ್ಕೆ ಪಾಲಿಕೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಅಗತ್ಯ ಸಹಕಾರ‌ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.