ಮಾಸಾಶನ ಕಲಾವಿದರ ಬದುಕಿಗೆ ಆಸರೆ


ಧಾರವಾಡ ಮೇ.19-ರಾಜ್ಯದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿರುವ ಕಲಾವಿದರಿಗೆ, ಸಾಹಿತಿಗಳಿಗೆ ಮತ್ತು ವಿಧವೆಯರಿಗೆ ಸರಕಾರ ಬಾಕಿಯಿದ್ದ ಎಲ್ಲ ತಿಂಗಳ ಮಾಸಾಶನವನ್ನು ನೀಡಲು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಕಲಾ ಸ್ಪಂದನ ಹಾವೇರಿ ವತಿಯಿಂದ ಸರಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಲಾಗಿತ್ತು. ಅದರಂತೆ ಸರಕಾರದಿಂದ ಮಾಸಾಶನಕ್ಕೆ ಅರ್ಹರಿದ್ದವರಿಗೆ ಬಿಡುಗಡೆ ಮಾಡಿ ಕಲಾವಿದರ ಬದುಕಿಗೆ ಆಸರೆಯಾಗಿದೆ. ಎಂದು ಅಧ್ಯಕ್ಷರಾದ ಕೆ.ಎಚ್.ನಾಯಕ ಮತ್ತು ಕಾರ್ಯದರ್ಶಿ ಮಾರ್ತಾಂಡಪ್ಪ ಎಮ್ ಕತ್ತಿ ಹೇಳಿದರು.
ಕೋವಿಡ್ ನಿಂದಾಗಿ ಕಲಾವಿದರ ಜೀವನ ಕಷ್ಟದಲ್ಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಮನವಿ ಮಾಡಲಾಗಿತ್ತು.ಆ ಮನವಿಗೆ ಸ್ಪಂದಿಸಿ ಕಲಾವಿದರ ಒಟ್ಟು 25 ಕೋಟಿಗಳಲ್ಲಿ ಮೊದಲ ಹಂತವಾಗಿ ಎರಡು ತಿಂಗಳ ಮಾಸಾಶನಕ್ಕೆ 6.25 ಕೋಟಿ ಬಿಡುಗಡೆಗೊಳ್ಳಿಸಿ ಕಲಾವಿದರ ಜೀವನ ನಿರ್ವಹಣೆಗೆ ಆಸರೆಯಾಗಿ ತಕ್ಷಣ ಸ್ಪಂದಿಸಿದ್ದು ಶ್ಲಾಘನೀಯಎಂದು ಮಾರ್ತಾಂಡಪ್ಪ ಎಮ್ ಕತ್ತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.