ಮಾಸನಕಟ್ಟಿಗೆ ಪಿಎಚ್.ಡಿ.

ಧಾರವಾಡ,ನ.4- ಇಲ್ಲಿಯ ಜೆ.ಎಸ್.ಎಸ್. ಡಾ. ಡಿ.ವೀರೇಂದ್ರ ಹೆಗ್ಗಡೆ ಸಂಶೋಧನ ಕೇಂದ್ರದ ಮೂಲಕ ಕನ್ನಡ ವಿಷಯದಲ್ಲಿ “ಜಾಗತೀಕರಣ ಸಂದರ್ಭದ ಕನ್ನಡ ಸಣ್ಣಕಥೆಗಳ ಮುಖ್ಯ ಪ್ರವೃತ್ತಿಗಳು” ಎಂಬ ವಿಷಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಗಂಗಾಧರ ಮಾಸನಕಟ್ಟಿ ಇವರ ಸಂಶೋಧನ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಿದೆ.
ಇವರಿಗೆ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ವಿನಯಾ ಜಿ. ನಾಯಕ ಅವರು ಮಾರ್ಗದರ್ಶಕರಾಗಿದ್ದರು.
ಇವರನ್ನು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ನ.ವಜ್ರಕುಮಾರ ಅವರು, ವಿತ್ತಾಧಿಕಾರಿಗಳಾದ ಡಾ. ಅಜಿತಪ್ರಸಾದ ಅವರು ಹಾಗೂ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿಗಳಾದ ಡಾ. ಜಿನದತ್ತ ಹಡಗಲಿ ಅಭಿನಂದಿಸಿದ್ದಾರೆ.