ಮಾಸದ ಮಾನಸ ಪುತ್ರ ಪುನೀತ್ ರಾಜ್‍ಕುಮಾರ್‍ಗೆ ನಮನ

ಮೈಸೂರು: ನ.28:- ಪುನೀತ್ ರಾಜ್ ಕುಮಾರ್ ಅವರ ಮೊದಲ ಮಾಸಿಕ ಪುಣ್ಯತಿಥಿ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರಣ್ಯ ಸೇವಾ ಸಮಿತಿ ವತಿಯಿಂದ ವಿದ್ಯಾರಣ್ಯಪುರಂ ಸೇಂಟ್ ಮೇರೀಸ್ ವೃತ್ತದಲ್ಲಿ ಮಾಸದ ಮಾನಸ ಪುತ್ರನ ಮಾಸಿಕ ನಮನ ಅಂಗವಾಗಿ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಹಾಗೂ ಕನ್ನಡ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಆನಂತರ ಸಾರ್ವಜನಿಕರಿಗೆ ಗೀ ರೈಸ್, ಚಿಕನ್ ಚಾಪ್ಸ್, ಚಿಕನ್ ಕಬಾಬ್, ವಿತರಿಸುವ ಮೂಲಕ ಮಾಂಸಾಹಾರವನ್ನು ಸಾರ್ವಜನಿಕರಿಗೆ ನೀಡುವ ಮೂಲಕ ವಿಶೇಷವಾಗಿ ಸ್ಮರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರ ನಿಧನ ಇಡೀ ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ ವನ್ನುಂಟಾಗಿದೆ. ಕೊಟ್ಯಾಂತರ ಅವರ ಅಭಿಮಾನಿಗಳ ಬಳಗಕ್ಕೆ ಸಿಡಿಲು ಬಡಿದಂತಾಗಿದೆ. ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡುವುದರ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯವಷ್ಟೇ ಅಲ್ಲ, ಇಡೀ ದೇಶದ ಗಮನಸೆಳೆದಿದ್ದರು. ಅಪ್ಪು ನಿಧನ ಸುದ್ದಿ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ, ಬಡವರ, ವಿಶೇಷವಾಗಿ ಬಡಮಕ್ಕಳ ಮಕ್ಕಳ ಬಗ್ಗೆ ಅವರಿಗಿದ್ದ ಪ್ರೀತಿ, ಕಳಕಳಿ, ಕಾಳಜಿ ನಿಜಕ್ಕೂ ಶ್ಲಾಘನೀಯ. ಕೇವಲ ಹಣವಿದ್ದರೇ ಸಾಲದು, ದೇವರು ಕೊಟ್ಟಾಗ ಕೈಲಾದಷ್ಟು ಇನ್ನೋಬ್ಬರಿಗೆ ನೆರವಾಗಬೇಕು ಎಂಬುದನ್ನು ಅಪ್ಪು ಸಾಬೀತು ಪಡೆಸಿದ್ದಾರೆ, ಅವರ ಆತ್ಮಕ್ಕೆ ದೇವರು ಶಾಂತಿ, ನೆಮ್ಮದಿ ನೀಡಲಿ, ಅವರ ಕುಟುಂಬದ ಎಲ್ಲ ಸದಸ್ಯರಿಗೆ ದುಖಃಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಕಾಂಗ್ರೆಸ್ ಮುಖಂಡರಾದ ಕುಮಾರ್ ಹರೀಶ್ ಗೌಡ ಮಾತನಾಡಿ ಯುವಕರು ಕನ್ನಡ ನಾಡು ನುಡಿ ಕಟ್ಟುವಲ್ಲಿ ಮುಖ್ಯಪಾತ್ರ ವಹಿಸಬೇಕು ಕನ್ನಡ ಸಂಸ್ಕೃತಿಯನ್ನು ಉಳಿಸಬೇಕು ಪುನೀತ್ ಅವರ ಸಾವು ಕನ್ನಡ ಚಿತ್ರರಂಗಕ್ಕೆ ಅಪಾರವಾದ ನಷ್ಟವನ್ನು ಉಂಟು ಮಾಡಿದೆ ಇಂಥ ಸಂದರ್ಭದಲ್ಲಿ ನಮ್ಮ ಕನ್ನಡಿಗರು 1ಆತ್ಮಸ್ಥೈರ್ಯವನ್ನು ತುಂಬಿ ಕೊಂಡು ಮುಂದಿನ ದಿನ ಈ ರೀತಿಯ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕೆಂದು ಹೇಳಿದರು.
ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಹರೀಶ್ ಗೌಡ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಮಂಜು ಗೌಡ, ಮಾಜಿ ಜಿಲ್ಲಾ ಅಧ್ಯಕ್ಷ ದ್ವಾರಕೀಶ್, ಮಾಜಿ ಮಹಾಪೌರರಾದ ರವಿಕುಮಾರ್, ವಿದ್ಯಾರಣ್ಯ ಸೇವಾ ಸಮಿತಿಯ ವಿನಯ್ ಕುಮಾರ್, ನಗರಪಾಲಿಕೆ ಸದಸ್ಯೆ ಶೋಭಾ ಸುನಿಲ್,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಶೇಖರ್, ಮಾಜಿ ನಗರ ಪಾಲಿಕಾ ಸದಸ್ಯರಾದ ಸುನೀಲ್ ಕುಮಾರ್, ಗೃಹಶೋಭೆಯ ಕೃಷ್ಣ, ಶಿವು, ಯೋಗೇಶ್ ಭೀಮಾ, ಪ್ರವೀಣ್, ಬಾಬು, ಪುರುಷೋತ್ತಮ್, ನಿರಂಜನ್, ಸತೀಶ್, ಹರೀಶ್, ಪ್ರಶಾಂತ್, ಅರ್ಜುನ್, ಕುಮಾರ್, ಮೋಹನ್, ನಾಗೇಂದ್ರ, ಕಾರ್ತಿಕ್, ವಿನಯ್ ಕಣಗಾಲ್, ರವಿತೇಜಾ ಸೇರಿದಂತೆ ಅಪಾರ ಆಭಿಮಾನಿಗಳು ಹಾಜರಿದ್ದರು.